»   » ಅಪ್ಪು ಈಗ ಕೋಟಿ ನಾಯಕನಾದನೆ?

ಅಪ್ಪು ಈಗ ಕೋಟಿ ನಾಯಕನಾದನೆ?

Subscribe to Filmibeat Kannada

* ದಟ್ಸ್‌ಕನ್ನಡ ಬ್ಯೂರೋ

ನಾಯಕನಾಗಿ ತನ್ನ ಮೊದಲೆರಡು ಚಿತ್ರಗಳಾದ ‘ಅಪ್ಪು’ ಹಾಗೂ ‘ಅಭಿ’ಯಲ್ಲಿ ಪುನೀತ್‌ ರಾಜ್‌ಕುಮಾರ್‌ ಯಶಸ್ಸು ಕಂಡಿರುವುದರಿಂದ ಈಗವರು ಅಣ್ಣ ಶಿವಣ್ಣನ ಹಾದಿಯಲ್ಲಿದ್ದಾರೆ. ಮೂರನೇ ಚಿತ್ರವೂ ಇವರನ್ನು ಗೆಲ್ಲಿಸುವ ಚಿತ್ರವೇ ಆಗಬೇಕೆಂಬುದು ಪಾರ್ವತಮ್ಮ ರಾಜ್‌ಕುಮಾರ್‌ ಕನಸು. ಅದಕ್ಕೆ ಬೇಕಾದ ಸಿದ್ಧತೆಗಳು ಸದಾಶಿವನಗದ ಅಪ್ಪು ತವರು ಮನೆಯಲ್ಲಿ ತಣ್ಣಗೆ ನಡೆಯುತ್ತಿದೆ ಅನ್ನೋದು ಒಂದು ಸುದ್ದಿ.

ಗಾಂಧಿನಗರದ ಓಣಿಯಲ್ಲಿ ಇನ್ನೊಂದು ಗುಸುಗುಸು ಶುರುವಿಟ್ಟುಕೊಂಡಿದೆ. ಅನೇಕ ನಿರ್ಮಾಪಕರು ಕಾಲ್‌ಶೀಟಿಗಾಗಿ ಕೈಚಾಚುತ್ತಿದ್ದರೂ ಈವರೆಗೆ ಸೊಪ್ಪು ಹಾಕದ ಪುನೀತ್‌ ರಾಜ್‌ಕುಮಾರ್‌ ಈಗ ಈ ಬಿಗಿ ನಿಲುವನ್ನು ಸಡಿಲಿಸಿದ್ದಾರಂತೆ. ತವರು ಬ್ಯಾನರ್‌ ಬಿಟ್ಟರೆ ಸದ್ಯಕ್ಕೆ ಬೇರೆಯವರ ಚಿತ್ರಗಳಿಗೆ ನೋ ಅನ್ನುತ್ತಿದ್ದ ಅಪ್ಪು ಒಬ್ಬ ತೆಲುಗು ನಿರ್ಮಾಪಕರ ಆಫರ್‌ಗೆ ಯೆಸ್‌ ಅಂದಿದ್ದಾರಂತೆ.

ಅಪ್ಪು ಮನವೊಲಿಸುವ ಈ ಯತ್ನದಲ್ಲಿ ಈ ನಿರ್ಮಾಪಕ ಕೊಡಲೊಪ್ಪಿರುವ ಸಂಭಾವನೆ ಎಷ್ಟು ಗೊತ್ತೆ ? ಕೇವಲ 1 ಕೋಟಿ ರುಪಾಯಿ. 50 ಲಕ್ಷ ರುಪಾಯಿ ಸಂಭಾವನೆ ಈಗಾಗಲೇ ಸಂದಾಯವಾಗಿದೆಯಂತೆ. ಕನ್ನಡದಲ್ಲಿ ಉಪ್ಪಿ ಬಿಟ್ಟರೆ ಬೇರಾವ ನಾಯಕನಿಗೂ ಈ ಪರಿಯ ಸಂಭಾವನೆ ಸಿಕ್ಕಿರುವ ಉದಾಹರಣೆಯಿಲ್ಲ. ಸದ್ಯಕ್ಕೆ ಉಪ್ಪಿ ರೇಟು ಕಡಿಮೆಯಾಗಿರುವುದರಿಂದ, ಸಿನಿಮಾ ಏಣಿಯ ಮೇಲಿನ ಮೆಟ್ಟಿಲ ಮೇಲೆ ಅಪ್ಪು ಕಾಲು ಇದೆ.


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada