»   » ಬಾಲಿವುಡ್ ನಾಯಕಿಯರ ಕಾಡಿಸಿ ಕಂಗೆಡಿಸಿದ ವಿಕೃತಗಾಮಿ!

ಬಾಲಿವುಡ್ ನಾಯಕಿಯರ ಕಾಡಿಸಿ ಕಂಗೆಡಿಸಿದ ವಿಕೃತಗಾಮಿ!

Subscribe to Filmibeat Kannada


ಹೈದರಾಬಾದ್, ಆಗಸ್ಟ್ 01 : ಬಾಲಿವುಡ್ ನಾಯಕಿಯರ ನಿದ್ದೆಗೆಡಿಸಿ, ವಿಕೃತ ಕರೆಗಳನ್ನು ಮತ್ತು ಪ್ರಚೋದನಕಾರಿ ಮೊಬೈಲ್ ಸಂದೇಶಗಳನ್ನು ಕಳಿಸುತ್ತಿದ್ದ ವಿಕೃತಕಾಮಿಯೊಬ್ಬನನ್ನು ಬಂಧಿಸಲಾಗಿದೆ.

ಕತ್ರೀನಾ ಕೈಫ್, ಕರೀನಾ ಕಪೂರ್, ಪ್ರಿಯಾಂಕ ಛೋಪ್ರಾ, ಕಂಗನಾ ರನಾವತ್, ರಾಖಿ ಸಾವಂತ್, ಯಾನಾ ಗುಪ್ತ, ಅಮೃತಾ ರಾವ್, ನೇಹಾ ದುಪಿಯಾ, ಇಶಾ ಕೊಪ್ಪಿಕರ್, ನಗ್ಮಾ ಹಾಗೂ ಪೂನಂ ದಿಲ್ಲೊನ್ ಮುಂತಾದ ನಟಿಯರನ್ನು ಈತ ಕಾಡುತ್ತಿದ್ದ ಎನ್ನಲಾಗಿದೆ.ಬಾಲಿವುಡ್ ಬಾಲೆಯರ ಮೊಬೈಲ್ ಸಂಖ್ಯೆಗಳನ್ನು ಪಡೆದು ಅವರ ನಿದ್ದೆಗೆಡಿಸುತ್ತಿದ್ದ ವಿಕೃತಗಾಮಿ ಮಿರಾಜ್ ಈಗ, ಹೈದರಾಬಾದಿನ ಪೊಲೀಸರ ಅತಿಥಿ.

ಒಮ್ಮೆ ಇಶಾ ಕೊಪ್ಪಿಕರ್ ಕೊಟ್ಟ ದೂರಿನ ಆಧಾರದ ಮೇಲೆ ಮುಂಬಯಿ ಪೋಲೀಸರ ಆತಿಥ್ಯ ಪಡೆದಿದ್ದ ಈ ವ್ಯಕ್ತಿ, ಜಾಮೀನಿನಿಂದ ಹೊರಬಂದ ನಂತರವೂ ತನ್ನ ಹಳೇ ಚಾಳಿಯನ್ನು ಬದಲಾಯಿಸದೇ ಮುಂದುವರೆಸಿದ. ಮುಂಬಯಿಯಿಂದ ಹೈದರಾಬಾದಿಗೆ ಹಾರಿದ ಮಿರಾಜ್,ಸುಮಾರು 11 ಬೇರೆ ಬೇರೆ ಮೊಬೈಲ್ ಸಂಖ್ಯೆಗಳನ್ನು , ಅನೇಕ ಬಾರಿ ಸ್ಥಿರ ದೂರವಾಣಿ ಬಳಸಿ ಕರೆ ಮಾಡುತ್ತಿದ್ದ ಎನ್ನಲಾಗಿದೆ.

ಇದೆಲ್ಲಾ ಹೇಗೆ ಶುರುವಾಯ್ತಪ್ಪ ಅಂದ್ರೆ...

ತಂದೆ ತಾಯಿ ತೀರಿ ಹೋದ ಬಳಿಕ ಒಂಟಿಯಾದ ಮಿರಾಜ್, ಮಾನಸಿಕ ದೌರ್ಬಲ್ಯಕ್ಕೆ ಈಡಾದ. ಮೊದಮೊದಲು ತನ್ನ ನೆಚ್ಚಿನ ನಾಯಕಿಯರಿಗೆ ಶುಭಾಶಯ ತಿಳಿಸುವ, ಅಭಿಮಾನ ವ್ಯಕ್ತಪಡಿಸುವ ಸಂದೇಶಗಳನ್ನು ಕಳಿಸುತ್ತಿದ್ದ.

ಯಾವಾಗ, ನಟಿಯರಿಂದ ಉತ್ತರ ಬರಲಿಲ್ಲವೋ , ಆಗ ಪ್ರೀತಿಯ ಸಂದೇಶ ಕಳಿಸಲು ಶುರು ಮಾಡಿದ, ಕೊನೆಗೆ ಪ್ರಚೋದನಕಾರಿ, ಅಸಭ್ಯ ಸಂದೇಶಗಳು, ಬೆದರಿಕೆ ಕರೆಗಳನ್ನು ಮಾಡಲು ಆರಂಭಿಸಿದ. ಕೊನೆಗೆ ಹೈದರಾಬಾದಿನ ಬಾಂದ್ರಾ ಪೊಲೀಸರಿಗೆ ಸಿಕ್ಕಿಬಿದ್ದ. ಸದ್ಯ ಮಿರಾಜ್ ಮುಂಬಯಿಯ ವಿಶೇಷ ನ್ಯಾಯಾಲಯದ ಮುಂದಿದ್ದಾನೆ.

(ಏಜನ್ಸೀಸ್)

Please Wait while comments are loading...