»   » ತರಲೆಗಳಾಗಲು ನಾರಾಯಣ್,ಓಂ ಪ್ರಕಾಶ್ ರೆಡಿ!

ತರಲೆಗಳಾಗಲು ನಾರಾಯಣ್,ಓಂ ಪ್ರಕಾಶ್ ರೆಡಿ!

Posted By:
Subscribe to Filmibeat Kannada


ಕತ್ತೆಗಳು,ಕೋತಿಗಳು,ಕುರಿಗಳುಮಾದರಿಯ ಇನ್ನೊಂದು ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ತಿಪ್ಪಾರಳ್ಳಿ ತರಲೆಗಳುಹೆಸರಿನ ಈ ಸಿನಿಮಾವನ್ನು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುವರು.

ಆ.5ರಂದು ಸಿನಿಮಾ ಸೆಟ್ಟೇರಲಿದ್ದು, ಮಹಾನ್ ತರಲೆಗಳ ಪಾತ್ರದಲ್ಲಿ ಸ್ವಘೋಷಿತ ಕಲಾಸಾಮ್ರಾಟ್ ಎಸ್.ನಾರಾಯಣ್, ಓಂ ಪ್ರಕಾಶ್ ರಾವ್ ಮತ್ತು ಕೋಮಲ್ ಅಭಿನಯಿಸುವರು.

ತೆರೆ ಹಿಂದೆಇದ್ದ ನಾರಾಯಣ್ ಮತ್ತು ಓಂ ಪ್ರಕಾಶ್ ಮತ್ತೆ ಬೆಳ್ಳೆತೆರೆ ಮೇಲೆ ಪ್ರತ್ಯಕ್ಷವಾಗುತ್ತಿದ್ದಾರೆ.ನೋಡುವ ಭಾಗ್ಯ ಅಥವಾ ಕರ್ಮ ಪ್ರೇಕ್ಷಕರದು. ಹೀರೋ ಆಗಬೇಕು ಎಂದು ಹಂಬಲಿಸುತ್ತಿದ್ದ ಜಗ್ಗೇಶ್ ಸೋದರ ಕೋಮಲ್ ಗೆ ಕೊನೆಗೂ ಹೀರೋ ಅವಕಾಶ ಸಿಕ್ಕಿದೆ! ಇತ್ತೀಚೆಗೆ ಸತತ ಸೋಲುಗಳನ್ನೇ ಕಂಡ ರಾಜೇಂದ್ರ ಸಿಂಗ್ ಬಾಬು, ಕಾಮಿಡಿ ಮಾಡಲು ಹೊರಟಿದ್ದಾರೆ. ಅವರ ಮುಖದಲ್ಲಿ ನಗೆ ಅರಳುವುದೇನೋ ನೋಡೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada