»   » ಧರ್ಮ ದಾರಿ ತಪ್ಪಿತು, ಪಾಪ ದುರ್ಗಾ!

ಧರ್ಮ ದಾರಿ ತಪ್ಪಿತು, ಪಾಪ ದುರ್ಗಾ!

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
‘ಮೀಸೆ ಚಿಗುರಿದಾಗ’ ಚಿತ್ರದಲ್ಲಿ ಯಥೋಚಿತ ಉದರ ದರ್ಶನ ಮಾಡಿಸಿದ ಹಾಟ್‌ ತಾರೆ ದುರ್ಗಾಶೆಟ್ಟಿಯನ್ನು ಮೆಚ್ಚಿ ಮದುವೆಯಾಗಲು ಮುಂದೆ ಬಂದಿದ್ದ ಉದಯೋನ್ಮುಖ ನಟ ಹಾಗೂ ಸುರಸುಂದರಾಂಗ ಧರ್ಮ ತನ್ನ ಮಾತು ತಪ್ಪಿದ್ದು ಯಾಕೆ?

ಬಲ್ಲ ಮೂಲಗಳ ಪ್ರಕಾರ ದುರ್ಗಾಳ ಡಿಸ್ಕೋ ಚಾಳಿ ಆತನನ್ನು ದಂಗುಬಡಿಸಿತಂತೆ. ನಿಮ್ಮನ್ನು ಮದುವೆಯಾಗುವಾಕೆ ಡಿಸ್ಕೋಥೆಕ್‌ನಲ್ಲಿ ಆ ಪಾಟಿ ಕುಣೀತಾಳಲ್ರೀ ಅಂತ ಅನೇಕರು ಧರ್ಮನ ಕಿವಿ ಚುಚ್ಚಿದ್ದರಿಂದಲೇ ಧರ್ಮ ದಾರಿ ತಪ್ಪಿತು ಎಂದು ಗಾಂಧಿನಗರ ಹೇಳುತ್ತಿದೆ.

ತನಗೆ ಡಿಸ್ಕೋಥೆಕ್‌ ಅಂದರೆ ತುಂಬಾ ಇಷ್ಟ ಅಂತ ದುರ್ಗಾಶೆಟ್ಟಿ ಕೂಡ ಖುಲ್ಲಂಖುಲ್ಲಾ ಹೇಳುತ್ತಾಳೆ. ಮದುವೆಯಾಗುವ ಹುಡುಗಿ ಹಲವಾರು ಮಂದಿಯ ಮುಂದೆ ಹಾಗೆ ಕುಣಿದರೆ ಯಾವ ಗಂಡು ಸಹಿಸಿಯಾನು? ಪಾಂಚಾಲಿಯ ವಸ್ತ್ರಾಪಹರಣವಾಗುತ್ತಿದ್ದರೂ ಮಹಾಭಾರತದ ಧರ್ಮರಾಯ ಸುಮ್ಮನಿದ್ದ . ಈ ಕಲಿಯುಗದ ಧರ್ಮ ಆ ರೀತಿಯವನಲ್ಲ !

‘ನಿನ್ನನ್ನು ನಾನು ಮದುವೆಯಾಗೋದಿಲ್ಲ ’ ಅಂತ ದುರ್ಗಾಶೆಟ್ಟಿಗೆ ಧರ್ಮ ನೇರವಾಗಿ ಹೇಳಿಬಿಟ್ಟಿದ್ದಾನೆ. ಇದರಿಂದಾಗಿ ದುರ್ಗಾಶೆಟ್ಟಿಯೇನೂ ಬೆಚ್ಚಿ ಬಿದ್ದಿಲ್ಲ . ಕಿಂಚಿತ್ತೂ ಕಳಕೊಂಡ ಭಾವ ತೋರದ ದುರ್ಗಾಶೆಟ್ಟಿ ‘ಆ್ಯಸ್‌ ಯೂ ವಿಷ್‌’ ಅಂತ ನಕ್ಕುಬಿಟ್ಟು , ಡಿಸ್ಕೋಥೆಕ್‌ ಕಡೆ ಅಡಿಯಿಟ್ಟಳಂತೆ.

ಅಂದಹಾಗೆ, ಈಗ ಧರ್ಮ ಹೇಗಿದ್ದಾನೆ ?
‘ಮದುವೆ ಮುರಿದದ್ದಕ್ಕೆ ಬೇಜಾರಾಗಿದೆ, ಅದಕ್ಕೇ ಡಿಸ್ಕೋಥೆಕ್‌ ಜಾಸ್ತಿಯಾಗಿದೆ’ ಅಂತ ದುರ್ಗಾ ಹೇಳಿಕೊಂಡು ಓಡಾಡುತ್ತಿರುವುದರಿಂದ ಧರ್ಮನ ಹೃದಯ ಇನ್ನಷ್ಟು ಘಾಸಿಯಾಗಿದೆಯಂತೆ.

Post your views

ಪೂರಕ ಓದಿಗೆ-
ದುರ್ಗಾ ಶೆಟ್ಟಿ ಕನ್ನಡ ಅಷ್ಟಕ್ಕಷ್ಟೇರೀ..


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada