»   » ನಂಗೆ ಹೆಣ್ಣು ಕೂಸು ಬೇಕು- ಮಾಧುರಿ

ನಂಗೆ ಹೆಣ್ಣು ಕೂಸು ಬೇಕು- ಮಾಧುರಿ

Posted By:
Subscribe to Filmibeat Kannada

‘ಅಮ್ಮ ಆಗುವುದರಲ್ಲಿರುವಷ್ಟು ಕಷ್ಟ ಹಾಗೂ ಖುಷಿ ಜೀವನದ ಬೇರೆ ಯಾವುದರಲ್ಲೂ ಇಲ್ಲ. ಹೂ ಮಗುವನ್ನು ಸಾಕುವುದೆಂದರೆ ಆ ಅವಧಿ ಒಂದು ದೊಡ್ಡ ಶ್ರಮ ಜೀವನ.... ’ ಹೀಗೆಂದವರು ಐದು ತಿಂಗಳ ಗಂಡು ಪಾಪುವನ್ನು ಕಂಕುಳಲ್ಲಿರಿಸಿಕೊಂಡಿರುವ ಗಜಗಾಮಿನಿ ಮಾಧುರಿ ದೀಕ್ಷಿತ್‌ !

ಮಾಧುರಿಯ ಪಾಪು- ಆರಿನ್‌ಗೆ ಈ ಬಾರಿ ಮೊದಲ ಗಣೇಶ ಹಬ್ಬ. ವಾಷಿಂಗ್ಟನ್‌ ಡಿಸಿಯಲ್ಲಿರುವ ತಮ್ಮ ಅಕ್ಕನ ಮನೆಯಲ್ಲಿ ಮಾಧುರಿ ಗಣೇಶ ಹಬ್ಬ ಆಚರಿಸಿದರು.

ಮಡಿಲಲ್ಲೊಂದು ಗಣೇಶನ ಇರಿಸಿಕೊಂಡ ಮಾಧುರಿ ಗಣಪತಿ ಹಬ್ಬದ ಸಂಭ್ರಮದಲ್ಲಿ ತಮ್ಮ ಹೊಸ ಆಸೆಯಾಂದನ್ನು ಹೇಳಿಕೊಂಡರು. ಅದೇನಪ್ಪಾ ಅಂದರೆ- ‘ಆರಿನ್‌ನನ್ನು ನೋಡಿಕೊಳ್ಳುವುದು ನನಗೆ ಏನೇನೂ ಕಷ್ಟವಾಗುವುದಿಲ್ಲ. ಪತಿ ಶ್ರೀರಾಮ್‌ ನೆನೆ ತುಂಬಾ ಒಳ್ಳೆಯ ಮನುಷ್ಯ. ಆದ್ದರಿಂದ ಆದಷ್ಟು ಬೇಗನೇ ನನಗೆ ಹೆಣ್ಣು ಮಗುವೊಂದನ್ನು ಹೆರುವ ಆಸೆಯಾಗಿದೆ’ !

ಅಂದಹಾಗೆ, ಬಾಣಂತನ ಮುಗಿಸಿಕೊಂಡಿರುವ ಮಾಧುರಿ ಈಗ ಮತ್ತೆ ಬಾಲಿವುಡ್‌ಗೆ ಮರಳಿದ್ದಾರೆ. ರೆkೂೕಯಾ ಅಕ್ತರ್‌ ಅವರ ಹೆಸರಿಡದ ಹೊಸ ಚಿತ್ರವೊಂದರಲ್ಲಿ ಮಾಧುರಿ ನಟಿಸುತ್ತಿದ್ದಾರೆ. ಶೂಟಿಂಗ್‌ ಸೆಟ್‌ಗೆ ಹೋಗುವಾಗಲೆಲ್ಲಾ ಹಸುಗೂಸು ಆರಿನ್‌ ಅಮ್ಮನ ಜೊತೆಗೇ ಇರುತ್ತಾನೆ.

ಆರಿನ್‌ ಹುಟ್ಟಿರುವುದರಿಂದ ಮಾಧುರಿಗೆ ಆಗಿರುವ ದೊಡ್ಡ ಲಾಭ ಎಂದರೆ ಪತಿ ಶ್ರೀರಾಮ್‌ ನೆನೆ ಸಂಜೆ ಬೇಗನೇ ಮನೆ ಸೇರುತ್ತಿರುವುದು !

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada