»   » ರವಿ ಚಿತ್ರದಲ್ಲಿ ರಜನಿಕಾಂತ್‌?

ರವಿ ಚಿತ್ರದಲ್ಲಿ ರಜನಿಕಾಂತ್‌?

Subscribe to Filmibeat Kannada

ಎಲ್ಲವೂ ಅಂದುಕೊಂಡಂತೆಯೇ ಆದರೆ ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಸ್ಯಾಂಡಲ್‌ವುಡ್‌ನಲ್ಲಿಯೂ ಮಿಂಚಲಿದ್ದಾರೆ. ಆಗ ಕನ್ನಡ ಚಿತ್ರರಂಗ ಪ್ರಕಾಶಿಸುತ್ತಿದೆ ಎಂದು ಧಾರಾಳವಾಗಿ ಹೇಳುವುದಕ್ಕೆ ಅಡ್ಡಿಯಿಲ್ಲ!

ಅಮಿತಾಭ್‌ ಮತ್ತು ಕಮಲಹಾಸನ್‌ ಬೆನ್ನಲ್ಲಿಯೇ ರಜನಿಕಾಂತ್‌, ಸ್ಯಾಂಡಲ್‌ವುಡ್‌ ಪ್ರವೇಶಿಸಲು ವೇದಿಕೆ ರೂಪುಗೊಳ್ಳುತ್ತಿದೆ. ತಮಿಳು ನಿರ್ಮಾಪಕರೇ ಕನ್ನಡ ಚಿತ್ರ ನಿರ್ಮಾಣ ಮಾಡಲಿದ್ದು, ರಜನಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿ ನಗರದಲ್ಲಿ ಕೇಳಿ ಬರುತ್ತಿದೆ.

ಮತ್ತೊಂದು ಕಡೆ ನಟ ರವಿಚಂದ್ರನ್‌ ಅವರ ನಿರ್ಮಾಣ ಮತ್ತು ನಿರ್ದೇಶನದ ಹೊಸ ಚಿತ್ರದಲ್ಲಿ ರಜನಿಕಾಂತ್‌ ನಾಯಕರಾಗಿ ನಟಿಸಲು ಸಮ್ಮತಿಸಿದ್ದಾರೆ. ರವಿ ಅವರ ತಂದೆ ವೀರಸ್ವಾಮಿ ಮತ್ತು ರಜನಿಕಾಂತ್‌ ನಂಟು ಹಿಂದೆ ತುಂಬಾ ಗಟ್ಟಿಯಾಗಿತ್ತು. ಹೀಗಾಗಿ ರವಿಚಂದ್ರನ್‌ ಆಹ್ವಾನಕ್ಕೆ ರಜನಿ ಹ್ಞೂಂ ಅಂದಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಸ್ಯಾಂಡಲ್‌ವುಡ್‌ನಲ್ಲಿಯೇ ಚಿತ್ರಬದುಕನ್ನು ಆರಂಭಿಸಿದ್ದ ರಜನಿಕಾಂತ್‌, ನಂತರ ಮದ್ರಾಸ್‌ಗೆ ತೆರಳಿ ತಮಿಳು ಚಿತ್ರ ಪ್ರೇಮಿಗಳ ಕಣ್ಮಣಿಯಾದರು. ವಿಷ್ಣುವರ್ಧನ್‌ರೊಂದಿಗೆ ‘ಗಲಾಟೆ ಸಂಸಾರ’, ‘ ಸಹೋದರರ ಸವಾಲ್‌’ ಚಿತ್ರಗಳಲ್ಲಿ ರಜನಿ ಅಭಿನಯಿಸಿದ್ದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada