»   » ಗಂಡು ಮಗು ಹೆತ್ತ ಕೀರ್ತಿ ; ವಿಷ್ಣುವರ್ಧನ್‌ ಈಗ ಅಕ್ಷರಶಃ ತಾತ

ಗಂಡು ಮಗು ಹೆತ್ತ ಕೀರ್ತಿ ; ವಿಷ್ಣುವರ್ಧನ್‌ ಈಗ ಅಕ್ಷರಶಃ ತಾತ

Subscribe to Filmibeat Kannada

ನಟ ವಿಷ್ಣುವರ್ಧನ್‌ಗೆ ತಾತನಾಗಿ ಬಡ್ತಿ ಸಿಕ್ಕಿದೆ. ಅವರ ದತ್ತು ಪುತ್ರಿ ಕೀರ್ತಿ ರಾಜ್ಯೋತ್ಸವದ ಮುನ್ನಾದಿನ, ಶುಕ್ರವಾರ (ಅ. 31) ಬೆಳಗ್ಗೆ ಗಂಡು ಮಗುವನ್ನು ಹೆತ್ತರು.

ಹೈದರಾಬಾದ್‌ನಲ್ಲಿ ‘ಕದಂಬ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ವಿಷ್ಣುವರ್ಧನ್‌ ತಾವು ತಾತ ಆದ ಸುದ್ದಿ ಫೋನ್‌ ಮೂಲಕ ಕಿವಿಗೆ ತಲುಪುತ್ತಿದ್ದಂತೆ ಆನಂದ ತುಂದಿಲರಾದರು. ತಕ್ಷಣವೇ ಶೂಟಿಂಗ್‌ಗೆ ತಾತ್ಕಾಲಿಕ ವಿರಾಮ ಕೊಟ್ಟು, ಬೆಳಗಿನ ವಿಮಾನ ಹತ್ತಿ ಬೆಂಗಳೂರಿಗೆ ಹಾರಿ ಬಂದರು. ತಾವು ಅಜ್ಜಿಯಾದ ಸಂತೋಷವನ್ನು ಭಾರತಿ ತಮ್ಮ ಯಜಮಾನರ ಜೊತೆ ಹಂಚಿಕೊಂಡರು.

ನಟ ಅನಿರುದ್ಧ್‌ ತಮ್ಮೆಲ್ಲ ಕೆಲಸಗಳನ್ನು ರದ್ದುಪಡಿಸಿ ಹೆಂಡತಿ- ಮಗುವಿನ ಜೊತೆ ಆಸ್ಪತ್ರೆಯಲ್ಲಿ ಕಾಲ ಕಳೆದರು. ಮಗು- ಬಾಣಂತಿ ಆರೋಗ್ಯವಾಗಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada