»   » ಐಟಂ ಗರ್ಲ್ ಮುಮೈತ್ ನಿರ್ದೇಶನದ ಸಿನಿಮಾ ಹೇಗಿರುತ್ತೋ?

ಐಟಂ ಗರ್ಲ್ ಮುಮೈತ್ ನಿರ್ದೇಶನದ ಸಿನಿಮಾ ಹೇಗಿರುತ್ತೋ?

Subscribe to Filmibeat Kannada

ದಕ್ಷಿಣ ಭಾರತದ ಪಡ್ಡೆಗಳ ನಿದ್ದೆಕೆಡಿಸಿರುವ ಐಟಂ ಗರ್ಲ್ ಮುಮೈತ್ ಖಾನ್, ಇದೀಗ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾಳೆ. 'ಒರಟ ಐ ಲವ್ ಯು'ಚಿತ್ರದ ಮುಖಾಂತರ ಮುಮೈತ್, ಕನ್ನಡದ ಪಡ್ಡೆಗಳಿಗೂ ಪರಿಚಿತೆ. ತೆಲುಗು ಮತ್ತು ತಮಿಳಿನಲ್ಲಿ ನಿರ್ದೇಶನ ಮಾಡಲು ಆಕೆ ಬಯಸಿದ್ದಾಳೆ. ಕನ್ನಡ ಪ್ರೇಕ್ಷಕರು ಸದ್ಯಕ್ಕೆ ಪಾರಾದರು ಅಂದರೇ, ಮುಮೈತ್ ಪ್ರೇಮಿಗಳು ಬೇಸರ ಮಾಡಿಕೊಳ್ಳಬಹುದು!

ಕಳೆದ ವಾರ 'ಮೈಸಮ್ಮ ಐಪಿಎಸ್'ತೆಲುಗು ಚಿತ್ರ ಬಿಡುಗಡೆಯಾಗಿ, ಆಂಧ್ರ ಬಾಕ್ಸಾಫೀಸಲ್ಲಿ ಸದ್ದು ಮಾಡಿದೆ. ಪವರ್ ಫುಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮುಮೈತ್ ನಟಿಸಿದ್ದು, ಈ ಚಿತ್ರ ತಮಿಳಿಗೂ ಡಬ್ ಆಗುತ್ತಿದೆ. ಈ ಹೊತ್ತಿನಲ್ಲಿ ನಟನೆ ಮತ್ತು ನಿರ್ದೇಶನದ ಹಂಬಲ ಮುಮೈತ್ ಮನದಲ್ಲಿ ಕಾರಂಜಿಯಂತೆ ಚಿಮ್ಮಿದೆ.

ತಮಿಳು ನಿರ್ದೇಶಕರನ್ನು ಆಕೆ ಸಂಪರ್ಕಿಸಿದ್ದು, ಒಳ್ಳೆ ಪಾತ್ರ ಮತ್ತು ಕತೆ ಸೃಷ್ಟಿಸುವಂತೆ ಕೋರಿದ್ದಾಳೆ. ನಟನಾ ಪ್ರತಿಭೆ ಹೊರಹಾಕುವ ಆಸೆ ಹೆಚ್ಚುತ್ತಿದೆ. ಇದೇ ಸಮಯದಲ್ಲಿ ನಿರ್ದೇಶಕಿಯಾಗುವ ಅವರ ಇನ್ನೊಂದು ಬಹುದಿನದ ಮಹತ್ವಾಕಾಂಕ್ಷೆ ಬೆಳಕಿಗೆ ಬಂದಿದೆ. ಮುಮೈತ್ ಮಹತ್ವಾಕಾಂಕ್ಷೆಗೆ ನೀರೆರೆಯುವುದಾಗಿ ಮಸಾಲಾ ಚಿತ್ರಗಳ ಖ್ಯಾತಿಯ ನಿರ್ದೇಶಕ ಎ.ವೆಂಕಟೇಶ್ ಭರವಸೆ ಬೇರೆ ಸಿಕ್ಕಿದೆ.

ಮುಂದಿನ ವರ್ಷ ಕಮರ್ಷಿಯಲ್ ಚಿತ್ರ ನಿರ್ದೇಶಿಸಲು ನಾನು ಸಿದ್ಧತೆ ನಡೆಸಿದ್ದೇನೆ. ನನ್ನ ಅನುಭವಗಳ ಬಳಸಿಕೊಳ್ಳಲು ಇದು ಸಕಾಲ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿರುವ ನನ್ನ ಆಪ್ತರು ಸಹಕಾರ ನೀಡುವುದಾಗಿ ಹೇಳಿದ್ದಾರೆ. ಒಳ್ಳೆ ನಿರ್ಮಾಪಕರು ಸಿಗದಿದ್ದರೇ, ನಿರ್ಮಾಪಕಿಯೂ ನಾನೇ ಆಗುತ್ತೇನೆ ಎಂದಿದ್ದಾರೆ ಮುಮೈತ್. ಆಕೆಗೆ ಒಳ್ಳೆಯದಾಗಲಿ.

(ದಟ್ಸ್ ಕನ್ನಡ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada