»   » ಸುದೀಪ್‌-ಭಾವನಾ ಉತ್ತಮ ನಟ-ನಟಿ

ಸುದೀಪ್‌-ಭಾವನಾ ಉತ್ತಮ ನಟ-ನಟಿ

Posted By:
Subscribe to Filmibeat Kannada

ಇತ್ತೀಚೆಗೆ ಮಂಕಾಗಿ ಹೋಗಿದ್ದ ನಟ ಸುದೀಪ್‌ಗೆ ‘ನಂದಿ’ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ. ಅವಕಾಶಗಳ ‘ಕ್ಷಾಮ’ ಅನುಭವಿಸುತ್ತಿರುವ ನಟಿ ಭಾವನಾಗೆ ಅದೇ ಹೆಸರಿನ ಚಿತ್ರದ ಅಭಿನಯಕ್ಕೆ ಉತ್ತಮ ನಟಿ ಪ್ರಶಸ್ತಿ. ಬಿ.ಸುರೇಶ್‌ ನಿರ್ದೇಶನದ ‘ಅರ್ಥ’ ಅತ್ಯುತ್ತಮ ಚಿತ್ರ. ವಿಜಯಾ ರೆಡ್ಡಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ. ಕೆ.ಸಿ.ಎನ್‌.ಗೌಡರ್‌ಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಕ್ಷಾಮ’ ದ್ವಿತೀಯ ಅತ್ಯುತ್ತಮ ಚಿತ್ರ. ಎಚ್‌.ವಾಸು ನಿರ್ದೇಶನದ ‘ಲಾಲಿ ಹಾಡು’ ಮೂರನೇ ಅತ್ಯುತ್ತಮ ಚಿತ್ರ. ಜಾನಪದ ಕವಿ ಕರೀಂ ಖಾನ್‌ಗೆ ವಿಶೇಷ ಕೊಡುಗೆ ನೀಡಿದ್ದಕ್ಕೆ ಪ್ರಶಸ್ತಿ- 2002- 03ನೇ ಇಸವಿಯ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಪ್ರಮುಖ ಅಂಶಗಳಿವು. ಸಾಕಷ್ಟು ಅಚ್ಚರಿಗಳುಳ್ಳ ಪ್ರಶಸ್ತಿ ಪಟ್ಟಿಯನ್ನು ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ಶನಿವಾರ (ನ. 29) ಪ್ರಕಟಿಸಿದರು.

ಪ್ರಶಸ್ತಿಗೆ ಭಾಜನರಾದ ಇತರರು-
ಅತ್ಯುತ್ತಮ ನಿರ್ದೇಶಕ - ಬಿ. ಸುರೇಶ್‌ (ಅರ್ಥ)
ದ್ವಿತೀಯ ಅತ್ಯುತ್ತಮ ನಿರ್ದೇಶಕ - ಬರಗೂರು ರಾಮಚಂದ್ರಪ್ಪ (ಕ್ಷಾಮ)
ತೃತೀಯ ಅತ್ಯುತ್ತಮ ನಿರ್ದೇಶಕ - ಎಚ್‌. ವಾಸು (ಲಾಲಿ ಹಾಡು)
ಅತ್ಯುತ್ತಮ ಸಾಮಾಜಿಕ ಚಿತ್ರ - ಸೈನಿಕ (ನಿರ್ದೇಶನ : ಮಹೇಶ್‌ ಸುಖಧರೆ)
ಅತ್ಯುತ್ತಮ ಮಕ್ಕಳ ಚಿತ್ರ - ಕಲರವ (ನಿರ್ದೇಶನ : ಪಿ. ಆರ್‌. ತಿಮ್ಮರಾಜು)
ಅತ್ಯುತ್ತಮ ಕಥಾಲೇಖಕ - ಯು. ಆರ್‌. ಅನಂತ್‌ಮೂರ್ತಿ (ಚಿತ್ರ : ಮೌನಿ)
ಅತ್ಯುತ್ತಮ ಪೋಷಕ ನಟ - ಕೋಮಲ್‌ ಕುಮಾರ್‌ (ಚಿತ್ರ : ತವರಿಗೆ ಬಾ ತಂಗಿ)
ಅತ್ಯುತ್ತಮ ಪೋಷಕ ನಟಿ - ಅರುಂಧತಿ ಜತ್ಕರ್‌ (ಚಿತ್ರ : ಕ್ಷಾಮ)
ಅತ್ಯುತ್ತಮ ಬಾಲನಟ - ಮಾಸ್ಟರ್‌ ನಿಖಿಲ್‌ ಕೃಷ್ಣ (ಚಿತ್ರ : ದೇವರ ಮಕ್ಕಳು)
ಅತ್ಯುತ್ತಮ ಬಾಲನಟಿ - ಬೇಬಿ ರಕ್ಷಾ (ಚಿತ್ರ : ಬಿಂಬ)
ಅತ್ಯುತ್ತಮ ಚಿತ್ರಕಥೆ - ಕವಿತಾ ಲಂಕೇಶ್‌ (ಚಿತ್ರ : ಬಿಂಬ)
ಅತ್ಯುತ್ತಮ ಸಂಕಲನಕಾರ - ಬಸವರಾಜ್‌ ಅರಸ್‌ (ಚಿತ್ರ : ಸೈನಿಕ)
ಅತ್ಯುತ್ತಮ ಕಲಾ ನಿರ್ದೇಶಕ - ಶಶಿಧರ್‌ ಅಡಪ (ಚಿತ್ರ : ಸಿಂಗಾರವ್ವ)
ಅತ್ಯುತ್ತಮ ಸಂಗೀತ ನಿರ್ದೇಶಕ- ಪ್ರಯೋಗ್‌ (ಪ್ಯಾರಿಸ್‌ ಪ್ರಣಯ)
ಅತ್ಯುತ್ತಮ ಹಿನ್ನೆಲೆಗಾಯಕ - ರಾಜೇಶ್‌ ಕೃಷ್ಣ (ಚಿತ್ರ : ದುಂಬಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ - ನಂದಿತಾ (ಚಿತ್ರ : ಪ್ಯಾರೀಸ್‌ ಪ್ರಣಯ)
ಅತ್ಯುತ್ತಮ ಗೀತ ರಚನೆಕಾರ - ನಾಗತಿಹಳ್ಳಿ ಚಂದ್ರಶೇಖರ್‌ (ಪ್ಯಾರಿಸ್‌ ಪ್ರಣಯ)
ತಂತ್ರ ಅಳವಡಿಕೆಗೆ ವಿಶೇಷ ಬಹುಮಾನ - ಹಾಲಿವುಡ್‌

(ಇನ್ಫೋ ವಾರ್ತೆ)

ರಿಮೇಕ್‌ ಚಿತ್ರಗಳಿಗೆ ಪ್ರಶಸ್ತಿ - ಸರ್ಕಾರದ ಚಿಂತನೆ ಸರಿಯಾ ?


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada