»   » ಚೈತ್ರಾ ಹಳ್ಳಿಕೇರಿ ಮತ್ತು ಬಾಲಾಜಿ ‘ಲವ್‌ಲವಿಕೆ’!

ಚೈತ್ರಾ ಹಳ್ಳಿಕೇರಿ ಮತ್ತು ಬಾಲಾಜಿ ‘ಲವ್‌ಲವಿಕೆ’!

Posted By:
Subscribe to Filmibeat Kannada


ಉದ್ಯಮಿಯ ಜೊತೆ ಪ್ರೇಮಾನುಬಂಧ... ಡಿ.15ರಂದು ಮೈಸೂರಿನಲ್ಲಿ ಕಲ್ಯಾಣೋತ್ಸವ...

ಎಲ್ಲಿ ಹೋದಳು ಈ ಚೆಂದದ ಹುಡುಗಿ ಚೈತ್ರಾ ಹಳ್ಳಿಕೇರಿ ಎಂದು ಹುಡುಕುವಾಗಲೇ, ಆಕೆಯ ನಿಶ್ಚಿತಾರ್ಥದ ಸುದ್ದಿ ತಿಳಿದುಬಂದಿದೆ. ಚೈತ್ರಾ ಕೈಹಿಡಿಯಲಿರುವ ವರ ಮಹಾಶಯ; ಬಾಲಾಜಿ. ಅವರು ಮೈಸೂರಿನಲ್ಲಿ ಯುವ ಉದ್ಯಮಿ.

ಮೈಸೂರಿನ ಚಾಮುಂಡೇಶ್ವರಿ ಒಳಾಂಗಣ ಕ್ರೀಡಾಂಗಣದಲ್ಲಿ ಈ ಜೋಡಿಯ ವಿವಾಹ ಡಿ.15ರಂದು ನಡೆಯಲಿದೆ. ಅಂದಹಾಗೆ ಬಾಲಾಜಿ ಮತ್ತು ಚೈತ್ರಹಳ್ಳಿಕೇರಿ ಅವರದು ಸ್ನೇಹದಿಂದ ತಿರುಗಿದ ಪ್ರೇಮ.

‘ಸಹಜ ಸ್ನೇಹಿತರಾಗಿದ್ದ ಬಾಲಾಜಿ, ಒಂದು ದಿನ ನಾನು ನಿನ್ನನ್ನು ಇಷ್ಟಪಟ್ಟಿದ್ದೇನೆ. ಇಬ್ಬರು ಮದುವೆಯಾಗೋಣವೇ ಎಂದು ಕೇಳಿಬಿಟ್ಟರು. ಅವರ ಮನೆಯವರು ನಮ್ಮ ಮನೆಗೆ ಆಗಮಿಸಿ, ನನ್ನ ಹೆತ್ತವರೊಂದಿಗೆ ಮದುವೆ ಮಾತುಕತೆ ಮುಗಿಸಿಯೇ ಬಿಟ್ಟರು. ಎಲ್ಲವೂ ಹಿತಕರವಾಗಿಯೇ ನಡೆದಿದೆ’ ಎನ್ನುತ್ತಾರೆ ಚೈತ್ರಾ ಹಳ್ಳಿಕೇರಿ.

ಮದುವೆ ನಂತರ ಪೂರ್ಣ ಪ್ರಮಾಣದಲ್ಲೇನೂ ಚಿತ್ರರಂಗದಿಂದ ಮಾಯವಾಗುವುದಿಲ್ಲ. ಒಳ್ಳೆ ಅವಕಾಶಗಳು ಸಿಕ್ಕರೆ ಖಂಡಿತ ಅಭಿನಯಿಸುತ್ತೇನೆ ಎಂದು ಚೈತ್ರಾ ಹೇಳಿದ್ದಾರೆ.

ಲವ್‌ಲವಿಗೆ, ಕಾಂಚನ ಗಂಗಾ, ಚೆಲುವೇ ಒಂದು ಹೇಳ್ತೀನಿ, ಶಿಷ್ಯ, ಗುನ್ನ, ಗೌಡ್ರು ಮತ್ತಿತರ ಚಿತ್ರಗಳಲ್ಲಿ ಚೈತ್ರಾ ನಟಿಸಿದ್ದು, ಹಂಸಲೇಖ ನಿರ್ದೇಶನದ ‘ಪ್ರೀತಿಗಾಗಿ’ ಧಾರಾವಾಹಿ ಮೂಲಕ ಅವರು ಬಣ್ಣದ ಪ್ರಪಂಚದ ಗಮನ ಸೆಳೆದವರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada