»   » ಏ.4ರಂದು ಚಿತ್ರಮಂದಿರಗಳಲ್ಲಿ 'ಆಕ್ಸಿಡೆಂಟ್'!

ಏ.4ರಂದು ಚಿತ್ರಮಂದಿರಗಳಲ್ಲಿ 'ಆಕ್ಸಿಡೆಂಟ್'!

Subscribe to Filmibeat Kannada

'ರಾಮ ಶ್ಯಾಮ ಭಾಮ' ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ನಟ ರಮೇಶ್ ಅರವಿಂದ್ 'ಸತ್ಯವಾನ್ ಸಾವಿತ್ರಿ'ಯನ್ನು ನಿರ್ದೇಶಿಸಿ ನೋಡುಗರಿಗೆ ನಗೆಯ ರಸದೌತಣ ನೀಡಿದ್ದರು. ಈ ವಾರ ರಮೇಶ್ ಅವರ ನಿರ್ದೇಶನದ ತೃತೀಯ ಚಿತ್ರ 'ಆಕ್ಸಿಡೆಂಟ್' ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.

ಸಾಫ್ಟ್‌ವೇರ್ ಸಂಸ್ಥೆಯೊಂದರ ಮಾಲೀಕರಾದ ರಘುನಾಥ್ ವಿಶಿಷ್ಟ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೌತುಕ ಘಟ್ಟಗಳನ್ನೊಳಗೊಂಡಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. 'ಆಕ್ಸಿಡೆಂಟ್'ಗಾಗಿ ಅಪಾರ ಶ್ರಮ ವಹಿಸಿರುವ ನಿರ್ಮಾಪಕ ರಘುನಾಥ್ ಹಾಗೂ ನಿರ್ದೇಶಕ ರಮೇಶ್ ಅರವಿಂದ್ 11 ಮಂದಿ ಹೊಸ ಪ್ರತಿಭೆಗಳನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತ್ತಿದ್ದಾರೆ.

ಹೊಸತನವನ್ನೊಳಗೊಂಡ ಸದಭಿರುಚಿಯ ಚಿತ್ರವನ್ನು ಪ್ರೇಕ್ಷಕರಿಗೆ ನೀಡಬೇಕೆಂಬ ಇರಾದೆ ಇಟ್ಟುಕೊಂಡಿರುವ ನಿರ್ದೇಶಕ ರಮೇಶ್‌ಅರವಿಂದ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ. ಜಿ.ಎಸ್.ಭಾಸ್ಕರ್ ಅವರ ಛಾಯಾಗ್ರಹಣ, ರಿಕ್ಕಿಕೇಜ್ ಸಂಗೀತ, ಸೌಂದರ್‌ರಾಜ್ ಸಂಕಲನ, ರಾಜೇಂದ್ರ ಕಾರಂತ್ ಸಂಭಾಷಣೆ, ಚಿನ್ನಿಪ್ರಕಾಶ್ ನೃತ್ಯ, ರವಿವರ್ಮ ಸಾಹಸ, ರವಿಜೋಷಿ ಅವರ ನಿರ್ಮಾಣ ಸಾರಥ್ಯವಿರುವ ಚಿತ್ರದ ತಾರಾಬಳಗದಲ್ಲಿ ರಮೇಶ್‌ಅರವಿಂದ್, ರೇಖಾ, ಪೂಜಾಗಾಂಧಿ, ಮೋಹನ್, ತಿಲಕ್, ಬಾಲಾಜಿ, ರಾಜೇಂದ್ರ ಕಾರಂತ್, ಮಹೇಶ್, ಸುಧಾರಾಣಿ, ಸತಿ ಐಯ್ಯರ್, ರೋಷನ್ ಮುಂತಾದವರಿದ್ದಾರೆ. ನಿರ್ದೇಶಕ ದಿನೇಶ್‌ಬಾಬು ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada