»   » ಪಂಚನಾಯಕರ ಚಿತ್ರದಲ್ಲಿ ರಿಯಲ್ ಸ್ಟಾರ್

ಪಂಚನಾಯಕರ ಚಿತ್ರದಲ್ಲಿ ರಿಯಲ್ ಸ್ಟಾರ್

Posted By:
Subscribe to Filmibeat Kannada

ವೃತ್ತಿಜೀವನದ ಆರಂಭದಿಂದಲ್ಲೂ ತನ್ನದೇ ಆದ ವಿಶಿಷ್ಟ ಅಭಿನಯಕ್ಕೆ ಹೆಸರಾದವರು ಉಪೇಂದ್ರ. ಬುದ್ದಿವಂತನಾಗಿ ಆಗಮಿಸಿರುವ ಉಪೇಂದ್ರ ಭಾಗ್ಯವಂತರಾಗುವ ಸಮಯ ಸಮೀಪಿಸುತ್ತಿದೆ. ಆದರೆ ಇದು ಹಣದ ಭಾಗ್ಯವಲ್ಲ. ಹತ್ತು ನಾಯಕಿಯರಿಗೆ ಏಕ ನಾಯಕನಾಗಿ ಹೆಜ್ಜೆ ಹಾಕುವ ಸೌಭಾಗ್ಯ. ಹೌದು. ಸೌಂದರ್ಯನಮನ ಕ್ರಿಯೇಷನ್ಸ್ ಲಾಂಛನದಲ್ಲಿ ಜಗದೀಶ್ ಅವರು ನಿರ್ಮಿಸುತ್ತಿರುವ ಮಸ್ತ್ ಮಜಾ ಮಾಡಿ ಚಿತ್ರದಲ್ಲಿ ನಾಯಕನೊಬ್ಬ ಬಹುತಾರೆಯರೊಂದಿಗೆ ನರ್ತಿಸುವ ಅದ್ದೂರಿ ಗೀತೆಯ ವಿಷಯದ ಬಗ್ಗೆ ಕೇಳಿ ತಿಳಿದಿದ್ದೇವೆ.

ಆದರೆ ಈಗ ಆ ನಾಯಕಿಯರೊಡನೆ ಕುಣಿಯುವ ಭಾಗ್ಯವಂತ ಉಪೇಂದ್ರ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಪಂಚನಾಯಕರು ಅಭಿನಯಿಸಿರುವ ಈ ಚಿತ್ರದ ಚಿತ್ರೀಕರಣವಾಗಿರುವ ಭಾಗಕ್ಕೆ ಹಂಸಲೇಖ ಅವರ ಸ್ಟೂಡಿಯೋದಲ್ಲಿ ಡಬ್ಬಿಂಗ್ ಪ್ರಕ್ರಿಯೆ ನಡೆಯುತ್ತಿದೆ..

ಅನಂತರಾಜು ನಿರ್ದೇಶನದ ಈ ಚಿತ್ರದಲ್ಲಿ ನಾಯಕರಾಗಿ ಸುದೀಪ್, ವಿಜಯರಾಘವೇಂದ್ರ, ದಿಗಂತ್, ನಾಗಕಿರಣ್,ಕೋಮಲ್‌ಕುಮಾರ್ ಅಭಿನಯಿಸುತ್ತಿದ್ದಾರೆ. ಈ ನಾಯಕರಿಗೆ ನಾಯಕಿಯಾಗಿ ಜೆನ್ನಿಫ಼ರ್‌ಕೊತ್ವಾಲ್ ಇದ್ದಾರೆ. ರಂಗಾಯಣರಘು, ಸಿಹಿಕಹಿಚಂದ್ರು ಮೊದಲಾದವರು ಇವರೊಂದಿಗಿದ್ದಾರೆ. ಬಾಲಾಜಿ ಸಂಗೀತ, ಎಂ.ಆರ್.ಸೀನು ಛಾಯಾಗ್ರಹಣ, ತ್ರಿಭುವನ್ ನೃತ್ಯ, ತಿರುಪತಿರೆಡ್ಡಿ ಸಂಕಲನ ಹಾಗೂ ರವಿವರ್ಮರ ಸಾಹಸ ಮಸ್ತ್ ಮಜಾ ಮಾಡಿ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)
ನಾಲ್ಕು ನಟರೊಂದಿಗೆ 'ಮಸ್ತ್ ಮಜಾ ಮಾಡಿ'!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada