For Quick Alerts
  ALLOW NOTIFICATIONS  
  For Daily Alerts

  ಜನ್ಮ ನಕ್ಷತ್ರ, ದಿನಾಂಕದಂತೆ ಮೀನಾ ಪುತ್ರಿ ನಾಮಕರಣ

  By Rajendra
  |

  ಮೊನ್ನೆಯಷ್ಟೇ ಮಲ್ಲು ಬೆಡಗಿ ನವ್ಯಾ ನಾಯರ್ ತನ್ನ ಮಗನಿಗೆ ಮುದ್ದಾದ ಹೆಸರಿಟ್ಟು ಸುದ್ದಿ ಮಾಡಿದ್ದರು. ಈಗ ಜನಪ್ರಿಯ ತಾರೆ ಮೀನಾ ಕೂಡ ತನ್ನ ಮಗಳಿಗೆ ಮುದ್ದಾದ ಹೆಸರನ್ನಿಟ್ಟಿದ್ದಾರೆ. ಸ್ವಲ್ಪ ಮಾಡ್ರನ್ ಆಗಿ ಥಿಂಕ್ ಮಾಡಿರುವ ಮೀನಾ ತನ್ನ ಮಗಳಿಗೆ ನೈನಿಕಾ ಎಂದು ಹೆಸರಿಟ್ಟಿದ್ದಾರೆ. ಹಾಗಂದರೆ 'ಕಣ್ಣಿನ ಗೊಂಬೆ(ಪಾಪೆ)' ಎಂದರ್ಥವಂತೆ!

  ಜನವರಿ 28ರಂದು ಚೆನ್ನೈನ ಮೀನಾ ಅವರ ಮನೆಯಲ್ಲಿ ನಾಮಕರಣ ಮಹೋತ್ಸವ ನಡೆದಿದೆ. ಮೀನಾ ಹಾಗೂ ಆಕೆಯ ಪತಿ ವಿದ್ಯಾಸಾಗರ್ ಸೇರಿದಂತೆ ಬಂಧು ಮಿತ್ರರು ಈ ನಾಮಕರಣ ಸಮಾರಂಭಕ್ಕೆ ಆಗಮಿಸಿದ್ದರು. 1.1.11ರಂದು ಮೀನಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

  ತನ್ನ ಮಗಳಿಗೆ ಮೀನಾ ಮಾಡ್ರನ್ ಆಗಿ ಹೆಸರಿಟ್ಟಿದ್ದರೂ ಹುಟ್ಟಿದ ದಿನಾಂಕ ಮತ್ತು ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ನೈನಿಕಾ ಎಂದು ಹೆಸರಿಟ್ಟಿದ್ದಾರೆ ಎಂದು ಮೀನಾ ಅವರ ತಾಯಿ ತಿಳಿಸಿದ್ದಾರೆ. ಮೀನಾ ಮತ್ತು ಅವರ ಕೂಸು ನೈನಿಕಾ ಅವರಿಗೆ ದಟ್ಸ್ ಕನ್ನಡ ಪರವಾಗಿ ಅಭಿನಂದನೆಗಳು.

  English summary
  South Indian popular actress Meena named her daughter Nainika. The naming ceremony at the actress’s residence in Chennai on January 28. Meena's mother told that they chose a name for the baby based on her star and the time of her birth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X