ಉಪ್ಪಿ ಜೊತೆ ರಾಗಿಣಿ ದ್ವಿವೇದಿ ಮತ್ತೊಂದು ಐಟಂ ಸಾಂಗ್

By Rajendra

'ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ ರಾಗಿಣಿ ದ್ವಿವೇದಿ "ತುಪ್ಪ ಬೇಕಾ ತುಪ್ಪ.." ಎಂದು ಕುಣಿದದ್ದೇ ತಡ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಐಟಂ ರಾಣಿ ದೊರಕಿದಂತಾಗಿದೆ. ಆಕೆಗೆ ಪಾಲಿಗೆ ಈಗ ಸಾಲು ಸಾಲು ಐಟಂ ಸಾಂಗ್‌ಗಳು ಹುಡುಕಿಕೊಂಡು ಬಂದಿವೆ. ಈಗ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ಐಟಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಲಿದ್ದಾರೆ.

ಆಪ್ತಮಿತ್ರ, ಆಪ್ತರಕ್ಷಕ ಚಿತ್ರಗಳ ಯಶಸ್ವಿ ನಿರ್ದೇಶಕ ಪಿ ವಾಸು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆರಕ್ಷಕ' ಚಿತ್ರದಲ್ಲಿ ರಾಗಿಣಿ ಬಿಕಿನಿಯಲ್ಲಿ ಕುಣಿದು ಕಳ್ಳ ಮಳ್ಳ ಸುಳ್ಳರನ್ನು ರಂಜಿಸಲಿದ್ದಾರೆ. ಈ ಚಿತ್ರದ ನಾಯಕಿ 'ಮೊನಾಲಿಸಾ' ಖ್ಯಾತಿಯ ನಟಿ ಸದಾ.

ಈಗಾಗಲೆ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದ್ದು, ಬ್ಯಾಂಕಾಕ್ ಹಾಗೂ ಪಟ್ಟ್ಟಾಯದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ರಾಗಿಣಿ ಅಭಿನಯದ ಸೋಲೋ ಐಟಂ ಸಾಂಗ್ ಇದು. ಉಪ್ಪಿ ಹಾಗೂ ಸದಾ ಜೋಡಿ ಮೇಲೆ ಇನ್ನೆರಡು ಹಾಡುಗಳನ್ನೂ ಚಿತ್ರೀಕರಿಸಿಕೊಳ್ಳಲಾಗಿದೆ.

'ಆರಕ್ಷಕ' ಚಿತ್ರದಲ್ಲಿ ರಾಗಿಣಿ ಮನೋವೈದ್ಯೆಯಾಗಿ ಕಾಣಿಸಲಿದ್ದಾರೆ. 'ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ ಒಂಚೂರು ತಮ್ಮ ಮೈಮಾಟವನ್ನು ಪ್ರದರ್ಶಿಸಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರಾಗಿಣಿ ಬಿಕಿನಿ ಹಾಗೂ ಅಂಡರ್‌ವಾಟರ್ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada actress Ragini Dwivedi to do an item song in Upendra lead movie Aarakshaka. Earlier she was seen in an item number in Kalla Malla Sulla movie's "Thuppa Bekaa Thuppa" song which became a big hit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X