ನಟಿ ಸಮಂತಾ ಹೊಕ್ಕುಳ ಇಳಿಜಾರಿನಲ್ಲಿ ಶೃಂಗಾರ ಕಾವ್ಯ
ತೆಲುಗು ಚಿತ್ರರಂಗದಲ್ಲಿ ಭದ್ರವಾಗಿ ನೆಲೆನಿಲ್ಲುತ್ತಿರುವ ತಾರೆಗಳಲ್ಲಿ ಸಮಂತಾ ಕೂಡ ಒಬ್ಬರು. ಈಕೆ ಅಭಿನಯದ ಇತ್ತೀಚಿನ 'ದೂಕುಡು' ಚಿತ್ರ ಬಾಕ್ಸಾಫೀಸನ್ನು 'ನೂಕುಡು' 'ನುಗ್ಗುಡು' ಮಾಡಿದೆ. ಈಕೆ ಅಭಿನಯದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಲ್ಲೋಲಕಲ್ಲೋಲ ಮಾಡುತ್ತಿವೆ.
ತೆಲುಗಿನಲ್ಲಿ ಈಕೆ ಅಭಿನಯದ ಏ ಮಾಯ ಚೇಸಾವೋ, ಬೃಂದಾವನಂ ಸೇರಿದಂತೆ ಇತ್ತೀಚೆಗೆ ತೆರೆಕಂಡ 'ದೂಕುಡು' ಚಿತ್ರಗಳು ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡಿವೆ. ಈಗ ಈಕೆಯ ಸಂಭಾವನೆ ಒಂದು ಕೋಟಿಗೆ ತಲುಪಿದೆ. ತೆಲುಗಿನಲ್ಲಿ ಈಕೆ ಇತ್ತೀಚೆಗೆ ಸಹಿ ಹಾಕಿರುವ ಚಿತ್ರಕ್ಕೆ ಒಂದು ಕೋಟಿ ಸಂಭಾವನೆ ಪಡೆದಿರುವ ಸುದ್ದಿಯೂ ಇದೆ.
ಸಮಂತಾ ಇತ್ತೀಚೆಗೆ ತಮ್ಮ ಹೊಕ್ಕುಳಿಗೆ ಹೊಸ ಸಿಂಗಾರ ಮಾಡಿಸಿಕೊಂಡಿದ್ದಾರೆ. ಮೊದಲೇ ಚೆಂದುಳ್ಳಿ ಚೆಲುವೆ. ಇನ್ನು ಸೊಂಟ, ಹೊಕ್ಕುಳು ಎಂದು ತೋರಿಸಿದರೆ ಪಡ್ಡೆಗಳ ಪರಿಸ್ಥಿತಿ ಏನಾಗಬೇಡ. ಮೊನ್ನೆ 'ದೂಕುಡು' ಸಕ್ಸಸ್ ಫಂಕ್ಷನ್‌ಗೆ ಈಕೆ ಮೈತುಂಬ ಸೀರೆಯುಟ್ಟು ಬಂದಿದ್ದರು. ಆದರೆ ಹೊಕ್ಕುಳಿಗಿಂತ ಸ್ವಲ್ಪ ಕೆಳಗೆ ಸೀರೆ ಇಳಿಬಿಟ್ಟಿದ್ದರು. ಆ ಇಳಿಜಾರಿನಲ್ಲಿ ಹೊಕ್ಕುಳ ಶೃಂಗಾರಕಾವ್ಯ ನೋಡಿ ಜಾರಿಬಿದ್ದವರೇ ಹೆಚ್ಚು. (ಏಜೆನ್ಸೀಸ್)


Click it and Unblock the Notifications











