»   » ಪ್ರೀತಿಯ ಹಂಗಾಮದಲ್ಲಿ ಶುಭಾ ಪುಂಜಾ

ಪ್ರೀತಿಯ ಹಂಗಾಮದಲ್ಲಿ ಶುಭಾ ಪುಂಜಾ

Subscribe to Filmibeat Kannada

ಪ್ರೀತಿ ಮಾಡುವಾಗ ನೆನಪಿಗೆ ಬಾರದ ಅಂಜಿಕೆ ಪ್ರೇಯಸಿಯನ್ನು ಹೆತ್ತವರಿಗೆ ಪರಿಚಯಿಸುವಾಗ ಬರುವುದು ಸಾಮಾನ್ಯ. ಆದರೆ ನಮ್ಮ ನಾಯಕ ವಿವೇಕ್‌ರಾಜ್ ಹಾಗಲ್ಲ. ತಾನು ಪ್ರೀತಿಸಿದ ಹುಡುಗಿ ಶುಭಾಪುಂಜಾಳನ್ನು ಹಳ್ಳಿಯಲ್ಲಿರುವ ತಂದೆ-ತಾಯಿಗೆ ಯಾವುದೇ ಅಂಜಿಕೆಯಿಲ್ಲದೆ ಪರಿಚಯಿಸಿದ ಧೈರ್ಯವಂತ.

ಈ ಪ್ರೀತಿಪರಿಚಯದ ಸನ್ನಿವೇಶವನ್ನು ನಿವಾಸಿನಿ ಆರ್ಟ್ಸ್ ಲಾಂಛನದಲ್ಲಿ ಪುಷ್ಪಾ ಹಾಗೂ ರಶ್ಮಿಏಕನಾಥ್ ಅವರು ನಿರ್ಮಿಸುತ್ತಿರುವ 'ಪ್ರೀತಿಯ ಹಂಗಾಮ ಚಿತ್ರಕ್ಕಾಗಿ ನಿರ್ದೇಶಕ ವಿವೇಕ್‌ರಾಜ್ ಚಿತ್ರೀಕರಿಸಿಕೊಂಡರು.

ನಗರದ ಹೊರವಲಯದ ರವಿಕಿರಣ್ ಸ್ಟೂಡಿಯೋ ಅಂದು ಹಳ್ಳಿಯಂತಾಗಿತ್ತು. ಅಲ್ಲಿ ನಿರ್ಮಿಸಿದ್ದ ಹಳ್ಳಿಮನೆಯ ಸೆಟ್‌ನಲ್ಲಿ ಈ ಮೇಲಿನೆ ದೃಶ್ಯ ಚಿತ್ರೀಕೃತವಾಯಿತು. ಅನಂತನಾಗ್, ಪದ್ಮಜಾರಾವ್, ವಿವೇಕ್‌ರಾಜ್, ಶುಭಾಪುಂಜ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವಿವೇಕ್‌ರಾಜ್ ಚಿತ್ರದ ನಿರ್ದೇಶಕರೂ ಹೌದು. ಆರು ಹಾಡುಗಳಿರುವ ಈ ಚಿತ್ರಕ್ಕೆ ರಾಜ್‌ಕಿರಣ್ ಸಂಗೀತ ಸಂಯೋಜಿಸಿದ್ದಾರೆ.

ಚಂದ್ರಶೇಖರ್ ಛಾಯಾಗ್ರಹಣ, ಮದನ್-ಹರಿಣಿ ನೃತ್ಯ, ಎಂ.ಎಸ್.ರಮೇಶ್ ಹಾಗೂ ಆರ್.ರಾಜಶೇಖರ್ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿವೇಕ್‌ರಾಜ್, ಶುಭಾಪುಂಜಾ, ಅವಿನಾಶ್, ಊರ್ವಶಿ, ಅನಂತನಾಗ್, ಪದ್ಮಜಾರಾವ್, ನಂದ, ಪ್ರಕಾಶ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡಸಿನಿ ವಾರ್ತೆ)

ಪ್ರೀತಿಯ ಹಂಗಾಮದಲ್ಲಿ ಶುಭಾ ತುಂಟಾಟ
ಕವಿರಾಜ್ ಸಾಹಿತ್ಯಕ್ಕೆ ಶುಭಾಪುಂಜಾ ನರ್ತನ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada