»   » ಅಣ್ಣಾಬಾಂಡ್ Vs ಇಂಡಿಯನ್ ಪ್ರೀಮಿಯರ್ ಲೀಗ್

ಅಣ್ಣಾಬಾಂಡ್ Vs ಇಂಡಿಯನ್ ಪ್ರೀಮಿಯರ್ ಲೀಗ್

Posted By:
Subscribe to Filmibeat Kannada
Anna Bond
ಎಪ್ರಿಲ್ ನಾಲ್ಕರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಐದನೇ ಆವೃತ್ತಿ ಆರಂಭವಾಗಲಿದೆ. ಸುಮಾರು ಎರಡು ತಿಂಗಳು ನಡೆಯುವ ಈ ಕ್ರಿಕೆಟ್ ಹಬ್ಬದ ಸಮಯದಲ್ಲಿ ಸಾಮಾನ್ಯಾಗಿ ದೊಡ್ಡ ಬಜೆಟ್ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಹಿಂದೇಟು ಹಾಕುತ್ತೆ, ಅದು ಹಿಂದಿ ಚಿತ್ರವಿರಲಿ, ಯಾವುದೇ ಭಾಷೆಯ ಚಿತ್ರವಿರಲಿ.

ಆದರೆ ಐಪಿಎಲ್ ಗೆ ತಲೆ ಕೆಡಿಸಿಕೊಳ್ಳದೆ ಇದೇ ತಿಂಗಳು ಅಂದರೆ ಎಪ್ರಿಲ್ 27 ರಂದು ಚಿತ್ರ ಬಿಡುಗಡೆ ಮಾಡಲು ಸದ್ಯ ಭಾರೀ ಸದ್ದು ಮಾಡುತ್ತಿರುವ ಬಹುನಿರೀಕ್ಷಿತ ಅಣ್ಣಾಬಾಂಡ್ ಚಿತ್ರತಂಡ ಸರ್ವ ಸನ್ನದ್ದವಾಗಿದೆ. ಎಪ್ರಿಲ್ 24 ರಂದು ಡಾ.ರಾಜಕುಮಾರ್ ಅವರ ಜನ್ಮದಿನ ಇರುವುದರಿಂದ 27 ರಂದು ಚಿತ್ರ ರಿಲೀಸ್ ಆಗುತ್ತಿದೆ.

ತನ್ನ ಚಿತ್ರದ ಬಗ್ಗೆ ನಿರ್ದೇಶಕ ಸೂರಿಗೆ ಇರುವ ಅದಮ್ಯ ವಿಶ್ವಾಸ. ಬಿಡುಗಡೆಯಾಗಿರುವ ಚಿತ್ರದ ಪ್ರೋಮೋಗಳು ಅಭಿಮಾನಿಗಳಲ್ಲಿ ಹುಟ್ಟಿಸಿರುವ ಭಾರೀ ಕ್ರೇಜ್, ಪುನೀತ್ ಬಳಸಿರುವ ಸ್ಕೆಲಿಟನ್ ಬೈಕ್, ಸ್ಟಂಟ್ ದೃಶ್ಯಗಳು, ಮಾಧ್ಯಮಗಳು ನೀಡುತ್ತಿರುವ ಸಿಕ್ಕಾಪಟ್ಟೆ ಹೈಪ್ ಇತ್ಯಾದಿ ಇತ್ಯಾದಿ ಕಾರಣಗಳಿರುವುದರಿಂದ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಐಪಿಎಲ್ ಗೆ ತಲೆ ಕೆಡಿಸಿಕೊಳ್ಳದೆ ಚಿತ್ರ ಬಿಡುಗಡೆಗೆ ಸಜ್ಜಾಗಿ ನಿಂತಿದ್ದಾರೆ.

ಇದೇ ಸಮಯಕ್ಕೆ ಸರಿಯಾಗಿ ತೆಲುಗಿನಲ್ಲೂ ಎರಡು ಭಾರೀ ಬಜೆಟ್ ಚಿತ್ರ ಬಿಡುಗಡೆಗೊಳ್ಳುತ್ತಿದೆ. ರಾಮ್ ಚರಣ್ ತೇಜ್ ಅಭಿನಯದ ರಚ್ಚ ಮತ್ತು ಜ್ಯೂ.ಎನ್ಟಿಆರ್ ಅಭಿನಯದ ದಮ್ಮು ಚಿತ್ರಗಳು ಬಿಡುಗಡೆಗೊಳ್ಳುತ್ತಿರುವುದರಿಂದ ಅಣ್ಣಾಬಾಂಡ್ ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಬಂದರೂ ಬರಬಹುದು. ಅಲ್ಲದೆ ಹಠಕ್ಕೆ ಬಿದ್ದು ನಮ್ಮದೇ ಇನ್ನೊಂದು ದೊಡ್ಡ ಬಜೆಟ್ ಚಿತ್ರ ಅದೇ ದಿನ ಬಿಡುಗಡೆ ಮಾಡಿ ಅಣ್ಣಾಬಾಂಡ್ ಚಿತ್ರಕ್ಕೆ ಪೈಪೋಟಿ ನೀಡಲು ಪ್ರಯತ್ನ ಪಟ್ಟರೆ ಆಶ್ಚರ್ಯ ಪಡಬೇಕಿಲ್ಲ.

ಅಣ್ಣಾಬಾಂಡ್ ಚಿತ್ರದ ಧ್ವನಿಸುರುಳಿ ಇಂದು ಮಾರುಕಟ್ಟೆಗೆ ಲಭ್ಯವಾಗಲಿದೆ. ಹರಿಕೃಷ್ಣ ಸಂಗೀತ ನೀಡಿರುವ ಎರಡು ಹಾಡುಗಳು ಈಗಾಗಲೇ ಸದ್ದು ಮಾಡುತ್ತಿವೆ. ಆಡಿಯೋ ಕ್ಲಿಕ್ ಆದರೆ ಚಿತ್ರಕ್ಕೆ ಸಿಗುವ ಇನ್ನೊಂದು ಪ್ಲಸ್ ಪಾಯಿಂಟ್.

ಅಣ್ಣಾಬಾಂಡ್ ಚಿತ್ರದ ಧ್ವನಿಸುರುಳಿ ವಿಮರ್ಶೆ ನಿರೀಕ್ಷಿಸಿ....

English summary
Much awaited Kannada movie Puneeth Rajkumar and Duniya Soori combinations second film Anna Bond set to release on April 27th even IPL cricket tournament season 5 in progress.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X