ಪ್ರೇಕ್ಷಕರಿಂದ ಆಟೋರಾಜನಾಗಿ 'ಅಜಯ್' ಆಯ್ಕೆ

ಸ್ಯಾನ್ ವಿಜನ್ಸ್ ಕಂಪೆನಿಯ ಚೇರ್ ಮನ್ ಹಾಗೂ ಎಂ ಡಿ ವಿಶ್ವ, ನಿರ್ದೇಶಕ ಗಿರೀಶ್ ಅವರು ತಾವು ನಿರ್ಮಿಸಲು ಉದ್ದೇಶಿಸಿರುವ 'ಆಟೋರಾಜ' ಚಿತ್ರಕ್ಕೆ ನಾಯಕನನ್ನು ಆಯ್ಕೆ ಮಾಡಿ ಎಂದು ಪ್ರೇಕ್ಷಕರಿಗೆ ಹೇಳಿ ಅವಕಾಶ ಕೊಟ್ಟಿದ್ದರು. ಪ್ರೇಕ್ಷಕರ ಆಯ್ಕೆಯಲ್ಲಿ ಸ್ಯಾಂಡಲ್ ವುಡ್ ಉಳಿದ ನಾಯಕರನ್ನು ಸೈಡ್ ಹೊಡೆದು ಆಟೋರಾಜನಾಗಿ ಹೊರಹೊಮ್ಮಿದ್ದಾರೆ ಅಜಯ್ ರಾವ್.

ಪ್ರೇಕ್ಷಕರ ಸ್ಪರ್ಧೆಯಲ್ಲಿ ಗೆದ್ದ ಅಜಯ್ ರಾವ್ ಗೆ ಸಂಪರ್ಕಿಸಿದಾಗ ಅವರು ಕಥೆ ಕೇಳಲು ಒಪ್ಪಿಕೊಂಡಿದ್ದಾರಂತೆ. ಅಜಯ್ ಗೆ ಕಥೆ ಒಪ್ಪಿಗೆಯಾದರೆ ಆಟೋರಾಜನಾಗಿ ಪ್ರೇಕ್ಷಕರು ಅವರನ್ನು ನೋಡಬಹುದು. ಆದರೆ ಅವರು ಒಪ್ಪಿಲ್ಲ ಅಂದರೆ, ಬಹುಶಃ ಪ್ರಾಜೆಕ್ಟ್ ಕ್ಯಾನ್ಸಲ್ ಆಗಬಹುದು. ಪ್ರೇಕ್ಷಕರು ಇಷ್ಟಪಡದಿದ್ದ ನಾಯಕರನ್ನು ಹಾಕಿ ಮಾಡಿದರೆ ನಿರ್ಮಾಪಕ ನಿರ್ದೇಶಕರೇ ನೋಡಬೇಕಾದೀತು!

ಈ ಆಟೋರಾಜನಿಗೆ 'ಒನ್ಸ್ ಅಗೇನ್' ಎಂಬ ಅಡಿ ಬರಹವಿದೆ. ' ಉದಯ್ ಪ್ರಕಾಶ್' ಎಂಬವರು ಚಿತ್ರ ನಿರ್ದೆಶಿಸುತ್ತಿದ್ದಾರೆ. ಮೊದಲೇ ವಿನಯ ಹಾಗೂ ಪ್ರತಿಭೆಯ ಸಂಗಮವಾಗಿರುವ ಅಜಯ್, ಪ್ರೇಕ್ಷಕರ ಆಯ್ಕೆಯನ್ನು ಖಂಡಿತ ತಳ್ಳಿಹಾಕುವುದಿಲ್ಲ. ಆದರೆ ಕಥೆ ಚೆನ್ನಾಗಿರಲೇಬೇಕು, ಇಲ್ಲದಿದ್ದರೆ ಅಜಯ್ ಒಪ್ಪಿ ಹಳ್ಳಕ್ಕೆ ಬೀಳಲಾಗುತ್ತದೆಯೇ? (ಒನ್ ಇಂಡಿಯಾ ಕನ್ನಡ)

More from Filmibeat

English summary
Audience Selects Ajay Rao as Hero of the upcoming movie Auto raja. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X