ಜುಲೈನಲ್ಲಿ 'ಬಿಂದಾಸ್ ಹುಡುಗಿ' ತೆರೆಗೆ

ನಂತರದ ಚಟುವಟಿಕೆಗಳನ್ನು ಶೀಘ್ರದಲ್ಲೇ ಪೂರೈಸುವುದಾಗಿ ತಿಳಿಸಿರುವ ನಿರ್ದೇಶಕರು ಜುಲೈ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಸಾಹಸ ಸನ್ನಿವೇಶಗಳಲ್ಲಿ ನೈಜವಾಗಿ ಪಾಲ್ಗೊಂಡಿರುವ ಪ್ರಿಯಾ ಹಾಸನ್ 'ಬಿಂದಾಸ್ ಹುಡುಗಿ'ಗೆ ಸ್ವದೇಶ ಸೇರಿದಂತೆ ವಿದೇಶದಲ್ಲೂ ಚಿತ್ರೀಕರಣ ನಡೆಸಿದ್ದಾರೆ.
ಗೌರಮ್ಮ ಹಾಗೂ ಮೋಹನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಾಲಕೃಷ್ಣ, ರವಿಕುಮಾರ್ ಮತ್ತು ದೇವಿಪ್ರಸಾದ್ ಶೆಟ್ಟಿ ಅವರ ಸಹ ನಿರ್ಮಾಣವಿದೆ. ಪ್ರಿಯಾ ಹಾಸನ್ ಕತೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ 'ಬಿಂದಾಸ್ ಹುಡುಗಿಗೆ ಯರ್ರಾ ರಮೇಶ್ ಅವರ ಸಂಗೀತವಿದೆ. ಆರ್.ಗಿರಿ ಛಾಯಾಗ್ರಹಣ, ಬಾಬು ಸಂಕಲನ, ಕೌರವ ವೆಂಕಟೇಶ್ ಸಾಹಸ, ಬಿ.ಎ.ಮಧು ಸಂಭಾಷಣೆ, ರಾಂ ನಾರಾಯಣ್, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಗೀತರಚನೆ ಹಾಗೂ ಶೃಂಗೇರಿ ಚಂದ್ರು ಅವರ ನಿರ್ಮಾಣ ನಿರ್ವಹಣೆಯಿದೆ.
ಚಿತ್ರದ ತಾರಾಬಳಗದಲ್ಲಿ ಪ್ರಿಯಾ ಹಾಸನ್, ನೀನಾಸಂ ಅಶ್ವತ್, ಭವ್ಯ, ಲೀಲಾವತಿ, ಸುರೇಶ್ ಮಂಗಳೂರು, ಗಣೇಶ್ ರಾವ್, ಮೋಹನ್ ಜುನೇಜ, ಶರಣ್, ಶಂಕರ್ ಅಶ್ವತ್, ಕಮಲ, ರಾಮಮೂರ್ತಿ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











