ಕುಲುಮನಾಲಿಯಲ್ಲಿ ದರ್ಶನ್ 'ಶೌರ್ಯ'

By Rajendra

ದರ್ಶನ್ ನಾಯಕನಾಗಿ ನಟಿಸುತ್ತಿರುವ 'ಶೌರ್ಯ' ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರವನ್ನು ಶ್ರೀಚಾಮುಂಡೇಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಬಸವರಾಜು ಹಾಗೂ ಎ.ವೆಂಕಟೇಶ್ ನಿರ್ಮಿಸುತ್ತಿದ್ದಾರೆ.

ಚಿತ್ರದ ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದ್ದು, ಈ ಪೈಕಿ ಒಂದು ಗೀತೆ ಭಾರತದ ಪ್ರಸಿದ್ದ ಪ್ರವಾಸಿ ತಾಣ ಕುಲುಮನಾಲಿಯಲ್ಲಿ ಚಿತ್ರೀಕರಣಗೊಳ್ಳಲಿದ್ದು, ಮತ್ತೆರಡು ಗೀತೆಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಸಾಧುಕೋಕಿಲಾ ತಿಳಿಸಿದ್ದಾರೆ.

ನಿರ್ದೇಶಕ ಸಾಧುಕೋಕಿಲಾ ಚಿತ್ರದ ಸಂಗೀತ ನಿರ್ದೇಶಕರು ಹೌದು. ರಮೇಶ್‌ಬಾಬು ಛಾಯಾಗ್ರಹಣ, ಜೋನಿಹರ್ಷ ಸಂಕಲನ, ಕೆ.ವಿ.ರಾಜು ಸಂಭಾಷಣೆ, ಪಳನಿರಾಜ್, ರವಿವರ್ಮ ಸಾಹಸ, ಪ್ರದೀಪ್ ಅಂತೋಣಿ ನೃತ್ಯ, ಇಸ್ಮಾಯಿಲ್ ಕಲಾ ನಿರ್ದೇಶನ, ಸುನೀಲ್ ಪಾಳ್ಯ ಸಹ ನಿರ್ದೇಶನ ಹಾಗೂ ಅನಿಲ್‌ಕುಮಾರ್ ನಿರ್ಮಾಣ ನಿರ್ವಹಣೆಯಿರುವ 'ಶೌರ್ಯ ಚಿತ್ರದ ತಾರಾಬಳಗದಲ್ಲಿ ದರ್ಶನ್, ರಿಮಾ ವರ್ಮ, ಮುಮೈತ್ ಖಾನ್, ಓಂಪ್ರಕಾಶ್, ಬುಲೆಟ್ ಪ್ರಕಾಶ್, ಸಂಪತ್‌ಕುಮಾರ್, ಜಾನ್‌ಕೋಕಿನ್, ಅವಿನಾಶ್, ರಮೇಶ್‌ಭಟ್, ಚಿತ್ರಾಶೆಣೈ ಮುಂತಾದವರಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X