»   » ಠುಸ್ ಎಂದ ಸುದೀಪ್, ಹರ್ಷ ಕಾಂಬಿನೇಷನ್ ಕಿಕ್

ಠುಸ್ ಎಂದ ಸುದೀಪ್, ಹರ್ಷ ಕಾಂಬಿನೇಷನ್ ಕಿಕ್

Posted By:
Subscribe to Filmibeat Kannada

'ಚಿಂಗಾರಿ' ಚಿತ್ರದ ಮೂಲಕ ನಿರ್ದೇಶಕರಾಗಿ ಬದಲಾಗಿರುವ ಡ್ಯಾನ್ಸ್ ಮಾಸ್ಟರ್ ಎ ಹರ್ಷ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಕಿಚ್ಚ ಸುದೀಪ್‌ಗೆ ಆಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ತೆಲುಗಿನ ಯಶಸ್ವಿ ಚಿತ್ರ 'ಕಿಕ್' ಕನ್ನಡಕ್ಕೆ ತರುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈಗ ಆ ಸುದ್ದಿ ಠುಸ್ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ 'ಚಿಂಗಾರಿ' ಚಿತ್ರ ಹಾಲಿವುಡ್ 'ಟೇಕನ್' ಚಿತ್ರದ ಪ್ರೇರಣೆಯಾಗಿತ್ತು. ಈ ಬಾರಿಯೂ ಮತ್ತೊಂದು ಹಾಲಿವುಡ್ ಚಿತ್ರದ ಪ್ರೇರಣೆಯೊಂದಿಗೆ ಚಿತ್ರ ಮಾಡುವ ಸೂಚನೆಯನ್ನು ಹರ್ಷ ಕೊಟ್ಟಿದ್ದಾರೆ.

ಸುದೀಪ್ ಜೊತೆ 'ಕಿಕ್' ಚಿತ್ರ ಮಾಡುತ್ತಿರುವ ಸುದ್ದಿಯನ್ನು ತಳ್ಳಿ ಹಾಕಿರುವ ಹರ್ಷ, ಸುದೀಪ್ ಜೊತೆ ಸ್ವಮೇಕ್ ಚಿತ್ರ ಮಾಡುತ್ತೇನೆ ಎಂದಿದ್ದಾರೆ. ಎನ್ ಕುಮಾರ್ ನಿರ್ಮಿಸಲಿರುವ ಈ ಚಿತ್ರ ಏಪ್ರಿಲ್‌ನಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. (ಏಜೆನ್ಸೀಸ್)

English summary
'Chingari' Kannada movie director A Harsha clarifies that he is not doing Telugu Kick with Sudeep. He doing original movie with the actor but not remake. The movie is being produced by N.Kumar.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X