»   » ಅಪ್ಪನಾಗಿ ಬಡ್ತಿ ಪಡೆದ ಯೋಗರಾಜ್ ಭಟ್!

ಅಪ್ಪನಾಗಿ ಬಡ್ತಿ ಪಡೆದ ಯೋಗರಾಜ್ ಭಟ್!

Subscribe to Filmibeat Kannada
Yogaraj Bhat promoted as Father
ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಇಂದು ತಂದೆಯಾದ ಸಂಭ್ರಮ. ಅವರ ಪತ್ನಿ ರೇಣುಕಾ ಯೋಗರಾಜ್ ಭಟ್ ಅವರು ಜಯನಗರ ಮೂರನೇ ಬ್ಲಾಕ್ ನಲ್ಲಿರುವ ಕ್ರೆಡಲ್ ಆಸ್ಪತ್ರೆಯಲ್ಲಿ ಮಂಗಳವಾರ (ಡಿ.2) ಮಧಾಹ್ನ 2.35ಕ್ಕೆ ಸರಿಯಾಗಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಯೋಗರಾಜ್ ಭಟ್ ರ ಮನೆಯಲ್ಲಿಗ ಸಂಭ್ರಮದ ವಾತಾವರಣ ನೆಲೆಗೊಂಡಿದೆ.

ಲಗೋರಿ ಚಿತ್ರಕ್ಕೆ ನಾಯಕಿ ಹುಡುಕುವುದರಲ್ಲಿ ಬ್ಯುಸಿಯಾಗಿರುವ ಯೋಗರಾಜ್ ಭಟ್ ಅವರಿಗೆ ದಟ್ಸ್ ಕನ್ನಡದ ಅಭಿನಂದನೆಗಳು. ಶೀಘ್ರದಲ್ಲೇ ಗೋಲ್ಡನ್ ಸ್ಟಾರ್ ಗಣೇಶ್ ಸಹ ತಂದೆಯಾಗಿ ಬಡ್ತಿ ಪಡೆಯಲಿದ್ದಾರೆ ಎಂಬ ಮತ್ತೊಂದು ಸಿಹಿ ಸುದ್ದಿ ಬಂದಿದೆ. ತುಂಬು ಗರ್ಭಿಣಿಯಾಗಿರುವ ಗಣೇಶ್ ರ ಪತ್ನಿ ಶಿಲ್ಪಾ ಅವರು ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲೇ ಗಣೇಶ್ ಕೈಗೆ ಕೂಸೊಂದನ್ನು ಕೊಡಲಿದ್ದಾರೆ.

ಒಟ್ಟಿನಲ್ಲಿ ಮುಂಗಾರು ಮಳೆಯ ಜನಪ್ರಿಯ ಜೋಡಿ ಪುತ್ರೋತ್ಸಾಹದಲ್ಲಿ ಮುಳುಗಿದೆ. ಪ್ರಸ್ತತ ಗಣೇಶ್ ಅವರು ಸರ್ಕಸ್ ಹಾಗೂ ಉಲ್ಲಾಸ ಉತ್ಸಾಹ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಶೀಘ್ರದಲ್ಲೇ ಉತ್ಸಾಹ ಉಲ್ಲಾಸಗಳು ಒಟ್ಟಿಗೆ ಲಭಿಸಲಿ ಎಂದು ನಮ್ಮ ಹೃತ್ಪೂರ್ವಕ ಹಾರೈಕೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada