ಬಾಬು ಎರಡನೆ ಮದುವೆ ಸಕ್ಸಸ್; ನಿರ್ಮಾಪಕ ನಿರಾಳ

By Rajendra

'ಎರಡನೆ ಮದುವೆ' ಚಿತ್ರ ಅರ್ಧ ಶತಕ ಬಾರಿಸಿದೆ. ಚಿತ್ರದ ನಿರ್ಮಾಪಕರಾದರಾಜೀವ್ ಮತ್ತು ಸುರೇಶ್ ಖುಷಿಯಾಗಿದ್ದಾರೆ. ಚಿತ್ರಕ್ಕೆ ಹಾಕಿದ್ದ ರು.1 ಕೋಟಿ 30 ಲಕ್ಷ ಬಂಡವಾಳ ಹರಿದು ಬಂದಿದೆ. ಇನ್ನೇನಿದ್ದರೂ ಲಾಭದ ಲೆಕ್ಕಾಚಾರ ನಡೆದಿದೆ. ಕರ್ನಾಟದಲ್ಲಷ್ಟೆ ಅಲ್ಲ ನೆರೆರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ಎರಡನೆ ಮದುವೆಗೆ ಪ್ರೇಕ್ಷಕರು ಅಕ್ಷತೆ ಕಾಳು ಹಾಕಿ ಶುಭ ಹಾರೈಸಿದ್ದಾರೆ.

ಮುಂಬೈ, ಚೆನ್ನೈ, ಪಶ್ಚಿಮ ಬಂಗಾಳ, ಕ್ಯಾಲಿಫೋರ್ನಿಯಾದಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಂತೆ. ಈ ಚಿತ್ರದನ್ನು ತೆಲುಗಿನಲ್ಲಿ ದಿನೇಶ್ ಬಾಬು ರೀಮೇಕ್ ಮಾಡುತ್ತಿರುವ ಕಾರಣ ಆಂಧ್ರದಲ್ಲಿ ಎರಡನೆ ಮದುವೆ ಬಿಡುಗಡೆಯಾಗಿರಲಿಲ್ಲ ಎಂದು ಚಿತ್ರದ ನಿರ್ಮಾಪಕ ಸುರೇಶ್ ತಿಳಿಸಿದ್ದಾರೆ.

ಚಿತ್ರ ಇಷ್ಟೊಂದು ಯಶಸ್ವಿಯಾಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಅನಂತನಾಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಎರಡನೆ ಮದುವೆ ಒಂದು ಸಾಧಾರಣ ಚಿತ್ರ. ಹಾಗಿದ್ದರೂ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ನಿರ್ದೇಶಕ ದಿನೇಶ್ ಬಾಬು ಮತ್ತೊಂದು ಮದುವೆ ಮಾಡುವ ಸಿದ್ಧತೆಯಲ್ಲಿದ್ದಾರೆ. ನನ್ನನ್ನು ಅವರು ಈಗಾಗಲೆ ಸಂಪರ್ಕಿಸಿದ್ದಾಗಿ ಅನಂತನಾಗ್ ತಿಳಿಸಿದರು. ಇನ್ನು ಮಾತುಕತೆ ನಡೆಯುತ್ತಿದೆ ಎಂದರು.

ಈ ಚಿತ್ರಕ್ಕೆ ಮಾಧ್ಯಮಗಳು ಕೊಟ್ಟಂತಹ ಬೆಂಬಲ ಶ್ಲಾಘನೀಯ. ಕ್ಲಾಸ್ ಮತ್ತು ಮಾನ್ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಿದೆ ಎಂದು ಲವ್ಲಿ ಸ್ಟಾರ್ ಪ್ರೇಮ್ ಹೇಳಿದರು. ಚಿತ್ರದ ಗಳಿಕೆ ಉತ್ತಮವಾಗಿದ್ದರೂ ಚಿತ್ರಮಂದಿರಗಳಿಂದ ಎತ್ತ್ತಂಗಡಿ ಮಾಡಿರುವ ಬಗ್ಗೆ ನಿರ್ಮಾಪಕರಲ್ಲಿ ಒಬ್ಬರಾದ ರಾಜೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಎರಡು ಚಿತ್ರಮಂದಿರಗಳಲ್ಲಿ ಎರಡನೆ ಮದುವೆ ಎತ್ತಂಗಡಿಯಾಗಿದೆ ಎಂದು ಅವರು ಅಲವತ್ತುಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X