ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಪ್ರತಿಷ್ಠಿತ ಫಿಲಂಫೇರ್?
ಫಿಲಂಫೇರ್ ಪ್ರಶಸ್ತಿ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಥಾನಪಡೆದಿದ್ದಾರೆ ಎನ್ನುತ್ತವೆ ಮೂಲಗಳು. ಈ ಬಾರಿಯ 58ನೇ ಫಿಲಂಫೇರ್ ವರ್ಣರಂಜಿತ ಕಾರ್ಯಕ್ರಮ ಶನಿವಾರ (ಜು.2) ರಾತ್ರಿ ಹೈದರಾಬಾದ್‌ನಲ್ಲಿ ನಡೆಯಲಿದೆ.
ಅಗ್ನಿ ಶ್ರೀಧರ್ ಚೊಚ್ಚಲ ನಿರ್ದೇಶನದ ತಮಸ್ಸು ಚಿತ್ರದ ಅಭಿನಯಕ್ಕಾಗಿ ಶಿವಣ್ಣ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಈಗಾಗಲೆ ಶಿವಣ್ಣನಿಗೆ ಕರೆ ಬಂದಿದೆ ಎನ್ನುತ್ತವೆ ಆಪ್ತಮೂಲಗಳು. ಸದ್ಯಕ್ಕೆ ಪ್ಯಾರಿಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಣ್ಣ ಪ್ರಶಸ್ತಿ ಸಮಾರಂಭಕ್ಕೆ ಬರುವುದು ಅನುಮಾನ.
ಶಿವರಾಜ್ ಕುಮಾರ್ ಪ್ಯಾರಿಸ್‌ಗೆ ಹೋಗಿರುವ ಸಂಗತಿಯನ್ನು ಸ್ವತಃ ರಾಘವೇಂದ್ರ ರಾಜ್ ಕುಮಾರ್ ತಮ್ಮ ಫೇಸ್‌ಬುಕ್‌ನಲ್ಲೂ ಸ್ಪಷ್ಟಪಡಿಸಿದ್ದಾರೆ. ಶಿವಣ್ಣ ಬೆಂಗಳೂರಿಗೆ ಹಿಂತಿರುಗಿದ ಬಳಿಕ ಎಲ್ಲ ಕೆಲಸಗಳು ಆರಂಭವಾಗಲಿವೆ ಎಂದು ಅಭಿಮಾನಿ ದೇವರುಗಳಿಗೆ ತಿಳಿಸಿದ್ದಾರೆ. ಈ ಬಾರಿಯ ಫಿಲಂಫೇರ್ ಪಟ್ಟಿಯಲ್ಲಿ ಇನ್ನಿಬ್ಬರು ಕನ್ನಡ ತಾರೆಗಳು ಇದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











