»   »  ಮಾತಿನ ಮನೆಯಲ್ಲಿ ಹೊಸ ಪ್ರತಿಭೆಗಳ ಗಗನಸಖಿ

ಮಾತಿನ ಮನೆಯಲ್ಲಿ ಹೊಸ ಪ್ರತಿಭೆಗಳ ಗಗನಸಖಿ

Subscribe to Filmibeat Kannada

ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿದ್ದುಕೊಂಡಿರುವ ಶಿವಕುಮಾರ್ ಇದುವರೆಗೂ 18 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಹಳ ದಿನಗಳ ಅಂತರದ ನಂತರ ಗಗನ ಸಖಿ ಎಂಬ ಮತ್ತೊಂದು ಚಿತ್ರವನ್ನು 2 ತಿಂಗಳ ಹಿಂದೆಯಷ್ಟೇ ಪ್ರಾರಂಭಿಸಿ ಚಿತ್ರೀಕರಣ ಮುಗಿಸಿದ್ದಾರೆ.

ಕಳೆದ ಗುರುವಾರದಿಂದ ಡಬ್ಬಿಂಗ್ ಕಾರ್ಯ ಕೂಡ ಪ್ರಾರಂಭವಾಗಿದೆ. ಮುಗ್ಧ ಯುವಕನೊಬ್ಬನ ಜೀವನದಲ್ಲಿ ದ್ವಂದ್ವ ವ್ಯಕ್ತಿತ್ವದ ಇಬ್ಬರು ಯುವತಿಯರ ಪ್ರವೇಶದಿಂದಾಗಿ ಉಂಟಾಗುವ ವೈಪರೀತ್ಯಗಳನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಸುಮಾರು 27 ದಿನಗಳ ಕಾಲ ಒಂದೇ ಹಂತದಲ್ಲಿ ಚಿಕ್ಕಮಗಳೂರು ಸುತ್ತಮುತ್ತ ಶೂಟಿಂಗ್ ಮಾಡಿ ಮುಗಿಸಲಾಗಿದ್ದು, ನಿರ್ದೇಶಕ ಶಿವಕುಮಾರ್ ಅವರೇ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ.

ಉದ್ಯಮಿ ನಾಗರಾಜ ಅವರ ಜೊತೆ ರಾಮಾಂಜನೇಯ ಹಾಗೂ ರಾಮಚಂದ್ರಪ್ಪ ಸೇರಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಮುತ್ತುರಾಜ್ ಅವರ ಛಾಯಾಗ್ರಹಣ, ಗಂಧರ್ವ ಅವರ ಸಂಗೀತ ಸಂಯೋಜನೆ, ಸಿ.ವಿ. ಶಿವಶಂಕರ್, ಗಂಧರ್ವ, ಶಿವಪ್ರಸಾದ್, ಸುಮತಿ ಅವರ ಸಾಹಿತ್ಯ ಈ ಚಿತ್ರಕ್ಕಿದ್ದು, ಹೊಸ ಪ್ರತಿಭೆ ಡಾ. ಮಾಧವನ್, ಭವಾನಿ ಗಾಂಧಿ (ದ್ವಿಪಾತ್ರ), ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್, ಮಾರಿಮುತ್ತು, ಕರಿಬಸವಯ್ಯ, ಸುರೇಶ ದಾವಣಗೆರೆ, ವಿಜಯಕುಮಾರ ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada