»   » ಗೋಲ್ಡನ್ ಸ್ಟಾರ್‌ಗೆ ಹುಟ್ಟುಹಬ್ಬದ ಸಂಭ್ರಮ

ಗೋಲ್ಡನ್ ಸ್ಟಾರ್‌ಗೆ ಹುಟ್ಟುಹಬ್ಬದ ಸಂಭ್ರಮ

Posted By:
Subscribe to Filmibeat Kannada

ಒಂದಾದ ನಂತರ ಒಂದು ಯಶಸ್ವಿ ಚಿತ್ರಗಳನ್ನು ಕೊಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇಂದು (ಜು.2) ಹುಟ್ಟು ಹಬ್ಬದ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನು ಶೇಷಾದ್ರಿಪುರಂನ ಕರ್ನಾಟಕ ಕ್ಷೇಮಾಭ್ಯುದಯ ಸಂಘದ ಅಂಧ ಮಕ್ಕಳೊಂದಿಗೆ ಇಂದು ಅವರು ಸರಳವಾಗಿ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಅಂಧ ಮಕ್ಕಳಿಗಾಗಿ ಕಂಪ್ಯೂಟರ್ ಲ್ಯಾಬನ್ನು ಸಹ ಉದ್ಘಾಟಿಸಿ ಅವರೊಂದಿಗೆ ಮಧ್ಯಾಹ್ನದ ಭೋಜನ ಸವಿದರು.

ಜುಲೈ 2ರಂದು ಬೆಳಗ್ಗೆ 10.30 ರಿಂದ ಸಂಜೆ 3 ಗಂಟೆಯ ತನಕ ಅಖಿಲ ಕರ್ನಾಟಕ ಗೋಲ್ಡನ್ ಸ್ಟಾರ್ ಅಭಿಮಾನಿಗಳ ಸಂಘ ರಕ್ತದಾನ ಶಿಬಿರವನ್ನು ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ರಾಜಾಜಿನಗರದಲ್ಲಿ ಆಯೋಜಿಸಿದೆ. ರಕ್ತದಾನ ಶಿಬಿರಕ್ಕೆ ಗಣೇಶ್ ಚಾಲನೆ ನೀಡಿ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.

ಟಪೋರಿ ಚಿತ್ರದ ಮೂಲಕ ಖಳನಾಗಿ ಪ್ರವೇಶಿಸಿದ ಗಣೇಶ್ ನಂತರ ಚೆಲ್ಲಾಟ, ತುಂಟಾಟ ಇನ್ನೂ ಏನೇನೋ ಆಟಗಳನ್ನು ಆಡಿ ಕನ್ನಡಿಗರ ಅಭಿಮಾನ ಸಂಪಾದಿಸಿದ್ದು ಎಲ್ಲರಿಗೂ ಗೊತ್ತೇ ಇದೆ! ಬೊಂಬಾಟ್ ಚಿತ್ರದ ಧ್ವನಿಸುರಳಿ ಇಂದು ಬಿಡುಗಡೆಯಾಗಲಿದೆ. ಸರ್ಕಸ್ ಹಾಗೂ ಸಂಗಮ ಚಿತ್ರಗಳು ಇನ್ನೂ ಸೆಟ್ಟೇರಬೇಕಾಗಿವೆ. ಗಣೇಶ್‌ರಿಂದ ಇನ್ನೂ ಉತ್ತಮ ಸದಭಿರುಚಿಯ ಚಿತ್ರಗಳು ಬರಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ನಿಮ್ಮ ನೆಚ್ಚಿನ ನಟ ಗಣೇಶ್ ಗೆ ಶುಭ ಹಾರೈಸಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada