ಗುರುಪ್ರಸಾದ್ ಡೈರೆಕ್ಟರ್ಸ್ ಸ್ಪೆಷಲ್‌ಗೆ ರಂಗಾಯಣ ರಘು
ಗುರುಪ್ರಸಾದ್ ಕೈಗೆತ್ತಿಕೊಂಡಿರುವ ಹೊಸ ಚಿತ್ರ 'ಡೈರೆಕ್ಟರ್ಸ್ ಸ್ಪೆಷಲ್' ಎಲ್ಲಿಗೆ ಬಂತು? ಒಂದು ವರ್ಷ ಕಳೆಯುತ್ತಿದ್ದರೂ ಈ ಚಿತ್ರದ ಬಗ್ಗೆ ಸುದ್ದಿ ಇಲ್ಲವಲ್ಲ ಎಂಬುದು ಅವರ ಅಭಿಮಾನಿಗಳ ಪ್ರಶ್ನೆ. ಈಗ ಎಲ್ಲ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿದೆ. ಶ್ರಾವಣ ಮಾಸದಲ್ಲೆ ಚಿತ್ರ ಆರಂಭವಾಗಲಿದೆ.
ಚಿತ್ರದ ಪ್ರಮುಖ ಪಾತ್ರಕ್ಕೆ ರಂಗಾಯಣ ರಘು ಅವರನ್ನು ಗುರು ಆಯ್ಕೆ ಮಾಡಿಕೊಂಡಿದ್ದಾರೆ ಗುರು. ವಿಶೇಷವಾಗಿ ಈ ಚಿತ್ರದಲ್ಲಿ ಕುಟುಂಬ ಮೌಲ್ಯಗಳಿಗೆ ಹಾಗೂ ಹಾಸ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಚಿತ್ರದ ಉಳಿದ ಪಾತ್ರಗಳ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ.
ರಂಗಾಯಣ ರಘು ಜೊತೆ ಗುರು ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಬಹುತೇಕ ಹೊಸಬರಿಗೆ ಚಾನ್ಸ್ ಕೊಡಲು ಮುಂದಾಗಿದ್ದಾರೆ ಗುರು. 2010ನೇ ವರ್ಷದಲ್ಲಿ ಗುರು ಹೆಚ್ಚಾಗಿ ಅತಿಥಿ ಪಾತ್ರಗಳು ಹಾಗೂ ಸಂಭಾಷಣೆ ಹೆಣೆಯುವುದರಲ್ಲಿ ಬ್ಯುಸಿಯಾಗಿದ್ದರು.
ಈ ಹಿಂದೆ ಕೋಮಲ್ ಕುಮಾರ್ ಅವರನ್ನು ಚಿತ್ರಕ್ಕೆ ಕರೆತರಲು ಉದ್ದೇಶಿಸಲಾಗಿತ್ತು. ಆದರೆ ಡೈರೆಕ್ಟರ್ಸ್ ಸ್ಪೆಷಲ್‌ಗೆ ಕೋಮಲ್ ನೋ ಎಂದಿದ್ದರು. ಮೂಲಗಳ ಪ್ರಕಾರ ಗಾಂಧಿನಗರದ ಒಳಗುಟ್ಟುಗಳ ಮೇಲೂ ಚಿತ್ರ ಬೆಳಕು ಚೆಲ್ಲುತ್ತದೆ ಎಂಬ ಕಾರಣಕ್ಕೆ ಕೋಮಲ್ ಹಿಂದೆ ಸರಿದಿದ್ದರು ಎನ್ನಲಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











