ಗೋಲ್ಡನ್ ಸ್ಟಾರ್ ಗಣೇಶ್‌ಗೆ ಹ್ಯಾಪಿ ಹ್ಯಾಪಿ ಬರ್ತ್ ಡೇ
ಕನ್ನಡ ಪ್ರೇಕ್ಷಕರೊಂದಿಗೆ ಚೆಲ್ಲಾಟ, ಹುಡುಗಾಟ, ತುಂಟಾಟ ಆಡಿದಗೋಲ್ಡನ್ ಸ್ಟಾರ್ ಗಣೇಶ್‌ಗೆ ನಮಸ್ಕಾರ ನಮಸ್ಕಾರ ನಮಸ್ಕಾರ. ಕಾರಣ ಸ್ಪಷ್ಟ,ಗಣೇಶ್‌ಗೆ ಇಂದು (ಜು.2) ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯೂ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನೂ ಮಾಡಿಸಿದರು.
ರಾಜರಾಜೇಶ್ವರಿ ನಗರದ ಮಾನಸಿಕ ವಿಕಲಚೇತನ ಮಕ್ಕಳಿಗೆ ಸಿಹಿ ಹಂಚುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡದ್ದು ವಿಶೇಷ. ಈಗಾಗಲೆ ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ಗೋಲ್ಡನ್ ಸ್ಟಾರ್ ನಿರ್ಮಾಪಕ, ನಿರ್ದೇಶಕನಾಗಿಯೂ ಅಂಬೆಗಾಲಿಟ್ಟಿದ್ದಾರೆ.
ವೃತ್ತಿಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಗಣೇಶ್ ಈಗ ಬದಲಾಗಿದ್ದಾರೆ. ಈ ಬದಲಾವಣೆ ಹೊಸ ಹೊಸ ಪ್ರಯೋಗಕ್ಕೆ ಕಾರಣವಾಗಿದೆ. ಗಣೇಶ್ ಏನೋ ಸರಳವಾಗಿ ಹುಟ್ಟುಹಬ್ಬ ಆಚರಿಕೊಂಡಿದ್ದಾರೆ. ಆದರೆ ಅವರ ಅಭಿಮಾನಿಗಳು ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಸದ್ಯಕ್ಕೆ ಶೈಲೂ, ರೋಮಿಯೋ ಹಾಗೂ ಮದುವೆ ಮನೆ ಚಿತ್ರಗಳಲ್ಲಿ ಗಣೇಶ್ ಬ್ಯುಸಿ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











