ಹೊಸಬರ ಇಂದಿನ ಸತ್ಯ ಚಿತ್ರೀಕರಣ ಆರಂಭ
ಕೆ.ಎಸ್.ಮೂವೀಮೇಕರ್‍ಸ್ ಲಾಂಛನದಲ್ಲಿ ಕಾಳಯ್ಯ.ಎಂ.ನಿರ್ಮಿಸುತ್ತಿರುವ ಆದಿತ್ಯಚಿಕ್ಕಣ್ಣ ನಿರ್ದೇಶನದ "ಇಂದಿನ ಸತ್ಯ" ಚಿತ್ರಕ್ಕೆ ಸುಂಕದ ಕಟ್ಟೆ ಹೊಯ್ಸಳ ನಗರ ಮುಖ್ಯರಸ್ತೆಯಲ್ಲಿರುವ ವೆಂಕಟೇಶ್ವರ ನಿಲಯದಲ್ಲಿ ಮುಹೂರ್ತ ನೆರವೇರಿತು.
ಅರಂಭದಲ್ಲಿ ಚಿತ್ರದುರ್ಗ ಶ್ರೀ ಕೃಷ್ಣ ಸಂಸ್ಥಾನದ ಮಠದ ಯಾದವಾನಂದ ಮಹಾಸ್ವಾಮಿಗಳು ಹಾಗೂ ಮಂದಾಕಿನಿ ಶ್ರೀನಿವಾಸ್ ಜ್ಯೋತಿ ಬೆಳಗಿದರು. ರಾಘವೇಂದ್ರ ರಾಜಕುಮಾರ್ ಕ್ಲಾಪ್ ತೋರಿದಾಗ ಕೆ.ಸಿ.ಎನ್.ಚಂದ್ರಶೇಖರ್ ಕ್ಯಾಮರಾ ಚಾಲನೆ ಮಾಡಿದರು.
ಈ ಚಿತ್ರಕ್ಕೆ ಛಾಯಾಗ್ರಹಣ ಬಿ.ಎಸ್.ಬಸವರಾಜು, ಸಂಗೀತ : ಭರಣಿಶ್ರೀ, ಸಂಕಲನ : ಟಿ.ಶಶಿಕುಮಾರ್, ಕಥೆ : ಎಸ್.ವಿ.ಪಾಟೀಲ್ ಗುಂಡೂರು, ಸಂಭಾಷಣೆ : ಮಳವಳ್ಳಿ ಸಾಯಿಕೃಷ್ಣ, ಕಲೆ : ಶ್ರೀನಿವಾಸ್, ಮೇಲ್ವಿಚಾರಣೆ ಶಿವಲಿಂಗಯ್ಯ , ನಿರ್ವಹಣೆ ಕೃಷ್ಣ ಮೈಸೂರು. ಭರತ್, ಕುಮಾರ್, ಅರವಿಂದ್, ಕಿಲ್ಲರ್ ವೆಂಕಟೇಶ್, ಮೈಕೋ ನಾಗರಾಜ್, ಹಾ.ಸಾ.ಕೃ. ರವಿಕುಮಾರ್, ಬಸವರಾಜ್, ಸ್ನೇಹಜೀವಿ ವೆಂಕಟೇಶ್ ಸುಧಾರಾಣಿ, ಪದ್ಮಾವಾಸಂತಿ, ಶೋಭಾ ಶಿವಲಿಂಗಯ್ಯ, ಕಸ್ತೂರಿ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದನ್ನೂ ಓದಿ
ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್
ನಾಗಶೇಖರ್‌ಗೆ ಕಾಗೆ ಹಾರಿಸಿದ ಗಣೇಶ
ಶಂಕರನಾಗ್ ಚಿತ್ರಮಂದಿರಕ್ಕೆ ಮರುಹುಟ್ಟು
ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ


Click it and Unblock the Notifications











