ಐ.ಪಿ.ಸಿ ಸೆಕ್ಷನ್ 300 ಚಿತ್ರಕ್ಕೆ ರೀರೆಕಾರ್ಡಿಂಗ್

By Staff

Vijaya Raghavendra
ಶ್ರೀಚೌಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಐ.ಪಿ.ಸಿ ಸೆಕ್ಷನ್ 300 ಚಿತ್ರಕ್ಕೆ ವೀರ ಸಮರ್ಥ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಕಾರ್ಯ ಭರದಿಂದ ಸಾಗಿದೆ ಎಂದು ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ.

ರೀರೆಕಾರ್ಡಿಂಗ್ ಚಿತ್ರದ ಪ್ರಮುಖ ಘಟ್ಟ. ಸಂಗೀತ ನಿರ್ದೇಶಕನ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವಿಭಾಗ ಕೂಡ. ತಮ್ಮ ಚಿತ್ರದಲ್ಲಿ ಹಿನ್ನಲೆ ಸಂಗೀತ ಉತ್ತಮವಾಗಿರಬೇಕೆಂಬ ಹಂಬಲ ಹೊತ್ತಿರುವ ನಿರ್ಮಾಪಕರು ಸಂಗೀತ ನಿರ್ದೇಶಕ ವೀರಸಮರ್ಥ್ ಅವರ ಸಾರಥ್ಯದಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಸಾಕಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿ, ಈಗ ಬೆಳ್ಳಿತೆರೆಯ ನಿರ್ದೇಶಕರಾಗಿ ಬಡ್ತಿ ಪಡೆದಿರುವ ಶಶಿಕಾಂತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ರಚಿಸಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ಈಶ್ವರ್ ಸಂಕಲನ, ಬಾಬು ಖಾನ್ ಕಲೆ, ಅರುಣ್ ಕುಮಾರ್ ಸಹ ನಿರ್ದೇಶನ, ಅಚ್ಯುತ್ ರಾವ್ ನಿರ್ಮಾಣ ನಿರ್ವಹಣೆ, ಹಾಗೂ ಎಚ್.ನರಸಿಂಹ(ಜಾಲಹಳ್ಳಿ) ನಿರ್ಮಾಣ ಮೇಲ್ವಿಚಾರಣೆಯಿದೆ. ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್, ಸೃಜನ್ ಲೋಕೇಶ್, ಯತಿರಾಜ್, ಶಂಕರ್, ರವೀಂದ್ರನಾಥ್ ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X