»   » ಎಸ್ ನಾರಾಯಣನ ಚಂದ್ರಮ ಚಿತ್ರಕ್ಕೆ ಸಿಕ್ಕ ಖಳ

ಎಸ್ ನಾರಾಯಣನ ಚಂದ್ರಮ ಚಿತ್ರಕ್ಕೆ ಸಿಕ್ಕ ಖಳ

Subscribe to Filmibeat Kannada

ಹಲವು ಚಿತ್ರಗಳ ಸೋಲುಗಳಿಂದ ಕಂಗೆಟ್ಟಿರುವ ಕಲಾ ಸಾಮ್ರಾಟ್ ಎಸ್ .ನಾರಾಯಣ್ ಈ ಬಾರಿ ವಿಶೇಷ ಆಸಕ್ತಿವಹಿಸಿ ಚಿತ್ರ ಮಾಡುತ್ತಿದ್ದಾರೆ. ಚೆಲುವಿನ ಚಿತ್ತಾರದ ಬಾಲೆ ಅಮೂಲ್ಯಳಿಗೆ ಮತ್ತೊಂದು ಅವಕಾಶ ನೀಡಿ. ಹೊಸ ಚಿತ್ರದ ಬಗ್ಗೆ ಘೋಷಣೆ ಮಾಡಿದ ನಾಣಿ ಸಾಹೇಬ್ರು. ಚಿತ್ರಕ್ಕೆ "ಚೈತ್ರದ ಚಂದ್ರಮ' ಎಂಬ ಆಕರ್ಷಕ ಹೆಸರನ್ನಿಟ್ಟಿದ್ದಾರೆ.

ನಾಯಕಿಯ ಆಯ್ಕೆಯನ್ನು ಸರಾಗವಾಗಿ ಮಾಡಿದ ನಾರಾಯಣ್, ಎಚ್ಚರಿಕೆಯ ಗತಿಯಲ್ಲಿ ಉಳಿದ ತಾರಾಗಣದ, ತಂತ್ರಜ್ಞರ ಆಯ್ಕೆಯಲ್ಲಿ ಮಗ್ನರಾಗಿದ್ದಾರೆ. ಈ ಚಿತ್ರಕ್ಕೆ ನಾಯಕನ ಯಾರು ಎಂಬ ಬಗ್ಗೆ ಗಾಂಧಿನಗರಕ್ಕೆ ಕುತೂಹಲ ಮೂಡಿಸಿದ್ದರು. ಕಡೆಗೆ ತಮ್ಮ ಪುತ್ರನನ್ನೇ ಹೀರೋ ಮಾಡಿದ್ದಾರೆ. ಈ ಮುಂಚೆ 'ವೀರು' ಚಿತ್ರದಲ್ಲಿ ನಟಿಸಿದ ಅನುಭವವಿರುವ ನಾರಾಯಣ್ ಅವರ ಮಗ ಪಂಕಜ್ ಅವರು ಅಮೂಲ್ಯ ಜತೆ ನಟಿಸಲು ಸಿದ್ಧರಾಗಿದ್ದಾರೆ.

ಈಗ ಹೀರೋಗೆ ತಕ್ಕ ವಿಲನ್ ಹುಡುಕಾಟದಲ್ಲಿ ತೊಡಗಿದ್ದಾರೆ. ಹಿರಿಯ ವಿಲನ್ ಗಳನ್ನು ಹಾಕಿಕೊಂಡರೆ, ಹೊಂದಾಣಿಕೆಯಾಗುವುದಿಲ್ಲ ಎಂಬ ಲೆಕ್ಕಾಚಾರ ಹಾಕಿ ನಿರ್ದೇಶಕ ಪಿ.ಎನ್ .ಸತ್ಯಾ ಅವರನ್ನು ಖಳನಾಯಕನಾಗಿ ನಟಿಸಲು ಆಹ್ವಾನವಿತ್ತಿದ್ದಾರೆಂದು ಸುದ್ದಿ ಬಂದಿದೆ.

ದರ್ಶನ್ ಅವರಿಗೆ ರೌಡಿಸಂ ಇಮೇಜ್ ಹುಟ್ಟು ಹಾಕಿ ಹಲವು ಬ್ರೇಕ್ ನೀಡಿ, ಗೂಳಿ ಮೂಲಕ ಸುದೀಪ್ ಅವರನ್ನು ಮತ್ತೆ ಗೆಲುವಿನ ಟ್ರಾಕ್ ಗೆ ಕರೆತಂದ ಕೀರ್ತಿ ಹೊಂದಿರುವ ಪಿ.ಎನ್ .ಸತ್ಯಾ ಅವರು ನಿರ್ದೇಶನದ ಜತೆಗೆ ನಟನೆಯಲ್ಲೂ ಕೂಡ ವಿಭಿನ್ನ ರೀತಿಯ ವಿಲನ್ ಆಗಿ ಜನಮೆಚ್ಚಿಗೆ ಗಳಿಸಿರುವುದೇನೋ ಸತ್ಯ. ಆದರೆ ಕಲಾ ಸಾಮ್ರಾಟರ ಚಿತ್ರದಲ್ಲಿ ಅವ್ರ ಮಗನ ಕೈಲಿ ಒದೆ ತಿನ್ನುತ್ತಾರಾ ಎಂಬುದು ಇನ್ನು ಪ್ರಶ್ನೆಯಾಗಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada