ಕೊಲವೆರಿಗಿಂತ ಭಟ್ಟರು ಬರೆದ ಹಾಡೇ ಚೆನ್ನಾಗಿಲ್ವಾ?

ಯೋಗರಾಜ ಭಟ್ಟರ ಇತ್ತೀಚಿನ ಚಿತ್ರ 'ಪರಮಾತ್ಮ' ಚಿತ್ರ, ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ ಈ ಚಿತ್ರದ ಎಲ್ಲಾ ಹಾಡುಗಳು ಸಖತ್ ಫೇಮಸ್ ಆಗಿವೆ. ಈಗಲೂ ಸಾರ್ವಜನಿಕ ಸಮಾರಂಭಗಳಲ್ಲಿ ಹಾಗೂ ಎಫ್ ಎಂ ಗಳಲ್ಲಿ ಈ ಹಾಡುಗಳದೇ ಕಾರುಬಾರು. ಪರಮಾತ್ಮ ಹಾಡುಗಳು ನೋಕಿಯಾ ರಿಪೋರ್ಟ್ ನಲ್ಲಿ ಇಡೀ 'ಸೌತ್ ಇಂಡಿಯಾ'ಗೆ 'ನಂಬರ್ ಒನ್' ಸ್ಥಾನ ಪಡೆದಿತ್ತು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಆದರೆ, ಇದಕ್ಕಿಂತಲೂ ಚೆನ್ನಾಗಿರುವ ಈ ರೀತಿಯ 'ನಮ್ಮ ಹಾಡುಗಳು' ಈ ಕೊಲವೆರಿ ಹಾಡಿನ ರೀತಿಯಲ್ಲಿ ಮಾರ್ಕೆಟಿಂಗ್ ಆಗಿಲ್ಲ. ಜನರ ನಾಲಿಗೆ, ಕಿವಿ ಹಾಗೂ ಮನಸ್ಸಿನಲ್ಲೇ ಉಳಿದಿದೆ. ನೆರೆಯ ಚಿತ್ರರಂಗಗಳನ್ನು ನೋಡಿ ನಾವು ಕಲಿಯಬೇಕಾದ ಪಾಠಗಳಲ್ಲಿ ಇದೂ ಒಂದು. ಕೊಲವೆರಿ ಹಾಡು ರಜನಿಕಾಂತ್ ಅಳಿಯ ಬರೆದು ಹಾಡಿದ್ದಕ್ಕೆ ಅಷ್ಟು ಫೇಮಸ್ ಆಯ್ತು ಅನ್ನುವ ವಿಷಯ ಪಕ್ಕಕ್ಕಿಟ್ಟರೂ ಅವರಿಗಿಂತ ಸಾಕಷ್ಟು ಮೊದಲು ಬಂದ ಆ ರೀತಿಯ ಕನ್ನಡದ ಹಾಡುಗಳು 'ಮಾರ್ಕೆಟಿಂಗ್' ಆಗುವಲ್ಲಿ ಸೋತಿದ್ದು ನಿಜವಾದ ನೋವಿನ ವಿಷಯ. (ಒನ್ ಇಂಡಿಯಾ ಕನ್ನಡ)
More from Filmibeat
English summary
The Song 'Kolaveri di...' bug has bitten many hearts all around the nation, because of Dhanush Fans. But same format kannada songs were given by famous Director, Lyricist Yograj Bhat in Pancharanigi and paramathma.


Click it and Unblock the Notifications











