»   » ಬಂದ್‌ಗೆ ಕನ್ನಡ ಚಿತ್ರೋದ್ಯಮದ ಪೂರ್ಣಬೆಂ'ಬಲ'

ಬಂದ್‌ಗೆ ಕನ್ನಡ ಚಿತ್ರೋದ್ಯಮದ ಪೂರ್ಣಬೆಂ'ಬಲ'

Subscribe to Filmibeat Kannada

ಬೆಂಗಳೂರು, ಏ.2: ತಮಿಳುನಾಡಿನ ವಿವಾದಾತ್ಮಕ ಹೊಗೇನಕಲ್ ಜಲ ವಿವಾದವನ್ನು ವಿರೋಧಿಸಿ ಏ.10ರಂದು ಕರೆ ಕೊಟ್ಟಿರುವ ರಾಜ್ಯ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಬುಧವಾರ ತಿಳಿಸಿದರು.

ಏಪ್ರಿಲ್ 10ರಂದು ಎಲ್ಲಾ ಚಲನಚಿತ್ರಗಳ ಪ್ರದರ್ಶನವನ್ನು ರದ್ದು ಮಾಡಲಾಗುತ್ತದೆ. ಚಿತ್ರೀಕರಣವನ್ನೂ ‍ಸ್ಥಗಿತಗೊಳಿಸಿ ಬಂದ್‌ ಆಚರಿಸಲಾಗುವುದು. ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘವೂ ಸಹ ರಾಜ್ಯ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಡಾ.ರಾಜ್ ಅಭಿಮಾನಿಗಳ ಸಂಘವಾಗಲೀ, ಚಲನಚಿತ್ರ ವಾಣಿಜ್ಯ ಮಂಡಳಿಯಾಗಲೀ ಹೋರಾಟಕ್ಕೆ ಹಿಂದೆ ಮುಂದೆ ನೋಡುವುದಿಲ್ಲ ಎಂದು ಸಾ.ರಾ.ಗೋವಿಂದು ತಿಳಿಸಿದರು.

ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಾ.ರಾ.ಗೋವಿಂದು ಸೇರಿದಂತೆ ನಾಲ್ಕು ಮಂದಿ ಕನ್ನಡಿಗರನ್ನು ಅಮಾನತು ಮಾಡಿದೆ. ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ಎದೆಗುಂದುವುದಿಲ್ಲ ಎಂದು ಸಾ.ರಾ.ಗೋವಿಂದು ಪ್ರತಿಕ್ರಿಯಿಸಿದರು.

ಬಂದ್‌ಗೆ 300ಕ್ಕೂ ಅಧಿಕ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ.ಗಡಿ ಹೋರಾಟ ಸಮಿತಿ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡಸೇನೆ ರಾಜ್ಯಾಧ್ಯಕ್ಷ ಕುಮಾರ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್.ಮೂರ್ತಿ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿರುವುದಾಗಿ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ
ಕನ್ನಡಪರ ಹೋರಾಟಗಾರರಿಗೆ ಡಿಜಿಪಿ ಎಚ್ಚರಿಕೆ
ಸೂಪರ್ ಸ್ಟಾರ್ ರಜನಿಗೆ ಸಿಇಟಿ ಪರೀಕ್ಷೆ
ತಮಿಳುನಾಡಿನಲ್ಲಿ ಕನ್ನಡ ಚಾನೆಲ್ ಪ್ರಸಾರ ಬಂದ್
ಇಂದಿರಾಗಾಂಧಿಗಿಂತ ಬುದ್ದಿವಂತೆ, ಬಲೆ ಐನಾತಿ
ಏ.4ರಂದು ತಮಿಳು ಚಿತ್ರೋದ್ಯಮ ಭಾರೀ ಪ್ರತಿಭಟನೆ
ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada