»   » ಕಸ್ತೂರಿಯ 'ಸಿನಿಗಂಧ' ಪ್ರಶಸ್ತಿ ವಿತರಣೆ

ಕಸ್ತೂರಿಯ 'ಸಿನಿಗಂಧ' ಪ್ರಶಸ್ತಿ ವಿತರಣೆ

Subscribe to Filmibeat Kannada

ಬೆಂಗಳೂರು, ಮಾ3: ಪಿರಿಮಿಡ್ ಸಾಯಿ ಮೀರಾ ಸಂಸ್ಥೆ ನೇತೃತ್ವದಲ್ಲಿ ಕಸ್ತೂರಿ ವಾಹಿನಿಯು 2007 ನೇ ಸಾಲಿನ ಸಾಧಕರಿಗೆ 'ಸಿನಿಗಂಧ' ಪ್ರಶಸ್ತಿ ನೀಡಿ ಗೌರವಿಸಲಿದೆ. ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ್ ಆವರಣದಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮವನ್ನು ಖ್ಯಾತ ಕವಿ ಪ್ರೊ.ನಿಸಾರ್ ಅಹಮದ್ ಅವರು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಎಚ್.ಡಿ. ಕುಮಾರಸ್ವಾಮಿ, ಪಿರಿಮಿಡ್ ಸಂಸ್ಥೆಯ ನಿರ್ದೇಶಕ ಪಿ.ಎಸ್. ಸ್ವಾಮಿನಾಥನ್, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಅವರು ಆಗಮಿಸಲಿದ್ದಾರೆ.

ಇಂದು ಸಂಜೆ 6 ಕ್ಕೆ ಆರಂಭವಾಗಲಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಾಲಿವುಡ್ ಕಾರ್ಯಕ್ರಮಗಳ ಮಾದರಿಯಲ್ಲಿ ಅದ್ಭುತವಾದ ಸೆಟ್ ನಿರ್ಮಾಸಲಾಗಿದೆ. ಸರಿ ರಾತ್ರಿ ಕಳೆಯೋ ತನಕ, ಪುನೀತ್, ಪ್ರಜ್ವಲ್ ಸೇರಿದಂತೆ ಪ್ರಮುಖರು ನೃತ್ಯ ತಾಲೀಮು ನಡೆಸಿದ್ದಾರೆ. ಶೈಲಜಾ ಅವರು ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತಿದ್ದಾರೆ.

ಸಿನಿಮಾದ ವಿವಿಧ ಕ್ಷೇತ್ರಗಳನ್ನು ಸೇರಿಸಿ ಸುಮಾರು 18 ವಿಭಾಗಗಳಲ್ಲಿ ಸಿನಿಗಂಧ ಪ್ರಶಸ್ತಿಯನ್ನು ವಿತರಿಸಲಾಗುವುದು. ಳು ಸಂಗೀತ ನಿರ್ದೇಶಕರಿಗೆ 'ಸಪ್ತಸ್ವರ' ಪ್ರಶಸ್ತಿ ಕೊಡಲಾಗುವುದು. ಡಾ.ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ರವಿಚಂದ್ರನ್ ಅವರಿಗೆ ''ಸ್ನೇಹಜೀವಿ'' ಪ್ರಶಸ್ತಿ ಕೊಟ್ಟು ಗೌರವಿಸಲಾಗುವುದು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ''ಡಾ.ರಾಜ್‌ಕುಮಾರ್ ತ್ರಿನೇತ್ರ'' ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕಸ್ತೂರಿ ವಾಹಿನಿಯ ಮುಖ್ಯ ಕಾರ್ಯನಿರ್ವಾಹಕಿ ಅನಿತಾ ಕುಮಾರಸ್ವಾಮಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada