ಕೊಲವೆರಿ...ಡಿ ರೀತಿಯ ಹಾಡು ಕನ್ನಡದಲ್ಲಿ ಸಾಕಷ್ಟಿದೆ

ಉದಯೋನ್ಮುಖ ಸಂಗೀತ ನಿರ್ದೇಶಕ ಅನಿರುದ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡನ್ನು ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ಹಾಡಿಗೆ ಬಂದಿರುವ ಒಟ್ಟು ವ್ಯೂಸ್ 10,559,994 ಎಂದು ಹೇಳಲಾಗಿದೆ. ಬಾಲಿವುಡ್ ಬಿಗ್ ಬಿ, ಛೋಟಾ ಬಿ, ಖುಷ್ಬು, ಹೀಗೆ ಅಸಂಖ್ಯಾತ ಮಂದಿ ಈ ಹಾಡನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಸಿನಿಪ್ರೇಕ್ಷಕರಂತೂ ಕುಳಿತರೂ ನಿಂತರೂ ಇದೇ ಹಾಡಿನ ಬಗ್ಗೇ ಮಾತನಾಡುತ್ತಿದ್ದಾರೆ.
ಆದರೆ... ಆ ಹಾಡು ನಿಜವಾಗಿಯೂ ಅಷ್ಟೊಂದು ಚೆನ್ನಾಗಿದೆಯೇ? ಈ ಪ್ರಶ್ನೆಯೂ ಈಗ ಅಷ್ಟೇ ಸಾರ್ವತ್ರಿಕವಾಗಿದೆ. ಸತ್ಯದ ತಲೆಯ ಮೇಲೆ ಹೊಡೆದಂತೆ ಮಾತನಾಡುವ ಬಾಲಿವುಡ್ ಖ್ಯಾತ ನಿರ್ದೆಶಕ ರಾಮ್ ಗೋಪಾಲ್ ವರ್ಮಾ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. "ನನಗೆ ನಿಜವಾಗಿಯೂ ಹಾಡು ಇಷ್ಟವಾಗಿದೆಯೇ ಅಥವಾ ಎಲ್ಲರೂ ಇಷ್ಟಪಡುತ್ತಿದ್ದಾರೆಂದು ಇಷ್ಟವಾಗಿದೆಯೋ ಗೊಂದಲವಿದೆ" ಎಂದಿದ್ದಾರೆ.
ಬೇರೆಯವರ ಮಾತು ಹಾಗಿರಲಿ, ಈ ಹಾಡಿನಲ್ಲಿ ಅಂತಹ ವಿಷೇಷತೆಯೇನೂ ಇಲ್ಲ ಎನ್ನಬಹುದು. ಕಾರಣ, ತಮಿಳಿನಲ್ಲಿ ಈ ಹಾಡು 'ಹೊಸತನ' ಮೆರೆದಿರಬಹುದು. ಆದರೆ ಕನ್ನಡದಲ್ಲಿ ಆ ರೀತಿಯ ಹಾಡುಗಳು ಈಗಾಗಲೇ ಸಾಕಷ್ಟಿವೆ. ಖ್ಯಾತ ಸಿನಿಮಾ ಸಾಹಿತಿ ಹಾಗೂ ನಿರ್ದೇಶಕ ಯೋಗರಾಜ್ ಭಟ್, ಈ ರೀತಿಯ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನೀಡಿದ್ದಾರೆ. ಮುಂದಿನ ಪುಟ ನೋಡಿ...


Click it and Unblock the Notifications











