twitter
    For Quick Alerts
    ALLOW NOTIFICATIONS  
    For Daily Alerts

    ಪ್ರಥಮ ಪ್ರತಿಯಲ್ಲಿ ಮೂರು ಗುಟ್ಟು

    By Staff
    |

    ದಿನೇಶ್‌ಬಾಬು ಅವರು ಸಸ್ಪೆನ್ಸ್, ಕಾಮಿಡಿ, ಥ್ರಿಲ್ಲರ್, ಫ್ಯಾಮಿಲಿ ಡ್ರಾಮಾ ಹೀಗೆ ಎಲ್ಲಾ ರೀತಿಯ ಚಿತ್ರಗಳನ್ನು ನಿರ್ದೇಶಿಸಿದ್ದರೂ ಅದರಲ್ಲಿ ಅವರದೇ ಆದ ವಿಭಿನ್ನ ನಿರೂಪಣೆ ಇರುತ್ತದೆ. ಶ್ರೀ ಮೂಕಾಂಬಿಕಾ ಫಿಲಂಸ್ ಲಾಂಛನದಲ್ಲಿ ರಾಜೀವ್ ಹಾಗೂ ಪ್ರಶಾಂತ್ ನಿರ್ಮಿಸಿರುವ, ದಿನೇಶ್‌ಬಾಬು ನಿರ್ದೇಶನದ ಚಿತ್ರ ಮೂರು ಗುಟ್ಟು, ಒಂದು ಸುಳ್ಳು, ಒಂದು ನಿಜ.

    ಇದೂ ಕೂಡ ಪೂರ್ಣ ಪ್ರಮಾಣದ ಹಾಸ್ಯ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಂಡು, ಅಂತಿಮ ಹಂತದ ಕೆಲಸಗಳೆಲ್ಲಾ ಮುಗಿದು ಕಳೆದ ವಾರ ಚಿತ್ರದ ಪ್ರಥಮ ಪ್ರತಿ ಕೂಡ ಹೊರಬಂದಿದೆ. ಅಮೃತವರ್ಷಿಣಿ ನಂತರ ರಮೇಶ್ ಅರವಿಂದ್ ಅವರ ಜೊತೆ ಹಾಗೂ ಮಿ. ಗರಗಸ ನಂತರ ಕೋಮಲ್ ಜೊತೆ ದಿನೇಶ್ ಬಾಬು ನಿರ್ದೇಶನದ ಚಿತ್ರ ಇದಾಗಿದೆ. ಕಥೆ-ಚಿತ್ರಕಥೆ ಬರೆದು ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ಹೊತ್ತಿದ್ದಾರೆ.

    ಗಾಯಕ ಎಲ್.ಎನ್. ಶಾಸ್ತ್ರಿಯವರ ಪತ್ನಿ ಸುಮಾ ಶಾಸ್ತ್ರಿ ಪ್ರಥಮ ಬಾರಿಗೆ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿರುವುದು ಒಂದೇ ಹಾಡು ಅದೂ ಮಾಸ್ ಸಾಂಗ್ ಆಗಿರುತ್ತದೆ. ರಾಜೇಂದ್ರ ಕಾರಂತರ ಸಂಭಾಷಣೆ ಈ ಚಿತ್ರಕ್ಕಿದ್ದು, ರಮೇಶ್ ಅರವಿಂದ್, ಕೋಮಲ್, ನಂದಿನಿ, ಮಧು ಹೆಗ್ಡೆ, ಸುಧಾ ಬೆಳವಾಡಿ, ಶೃತಿ ನಾಯ್ಡು, ಶ್ರೀನಿವಾಸಮೂರ್ತಿ, ಪ್ರವೀಣ್ ಹಾಗೂ ನ್ಯಾನ್ಸಿ ಪ್ರಮುಖ ತಾರಾಗಣದಲ್ಲಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Wednesday, September 2, 2009, 14:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X