Just In
Don't Miss!
- News
ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೈಡನ್ ನೀಡಲಿರುವ ಆದೇಶಗಳಿವು
- Sports
ರಾಜಸ್ಥಾನ ತಂಡದಿಂದ ಸ್ಟೀವ್ ಸ್ಮಿತ್ ಔಟ್, ಸಂಜು ಹೊಸ ಕ್ಯಾಪ್ಟನ್!
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Automobiles
ಭಾರೀ ಗಾತ್ರದ ಎಸ್ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಿಲಂ ಚೇಂಬರ್‌ನಲ್ಲಿ 'ಆ ಮರ್ಮ' ತಂದ ಅವಾಂತರ
ಬಾಲಿವುಡ್ ನಟ ಜಾಕಿ ಶ್ರಾಫ್ ಕನ್ನಡದಲ್ಲಿ ಅಭಿನಯಿಸಿರುವ ಚಿತ್ರ 'ಆ ಮರ್ಮ'. ಈ ಚಿತ್ರ ಡಬ್ಬಿಂಗ್ ಅಲ್ಲ ಎಂದು ಈಗಾಗಲೆ ಆ ಚಿತ್ರದ ನಿರ್ದೇಶಕ ಮಧುಸೂಧನ್ ಸ್ಪಷ್ಟಪಡಿಸಿದ್ದರು. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಇದು ಡಬ್ಬಿಂಗ್ ಚಿತ್ರ ಎಂದು ತೀರ್ಪು ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಕೆಎಫ್‌ಸಿಸಿ ಕಾರ್ಯಕಾರಿ ಸಮಿತಿಯ 9 ಮಂದಿ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಮೇಶ್ ಬಣಕಾರ್, ಅಣಜಿ ನಾಗರಾಜ್, ದಿನೇಶ್ ಗಾಂಧಿ, ರಾಮಕೃಷ್ಣ, ಆರ್ ಎಸ್ ಗೌಡ, ಬಿ ಎನ್ ಗಂಗಾಧರ್, ಜಯಶ್ರೀದೇವಿ, ನಿರ್ದೇಶಕ ನಾಗಣ್ಣ ರಾಜೀನಾಮೆ ಸಲ್ಲಿಸಿದವರು. ವಿತರಕರ ವಲಯದಿಂದ ನಾರಾಯಣ ರೆಡ್ಡಿ, ಮಧುಕುಮಾರ್ ಕೂಡ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.
ಆ ಮರ್ಮ ಚಿತ್ರದ ನಿರ್ಮಾಪಕರೂ ಆಗಿರುವ ಮಧುಸೂಧನ್ ಹವಾಲ್ದಾರ್ ಅವರಿಗೆ ನ್ಯಾಯ ಸಿಕ್ಕಿಲ್ಲ. ಅವರಿಗೆ ನ್ಯಾಯ ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆ ಸ್ಥಾನದಲ್ಲಿ ಮುಂದುವರೆಯಲು ನಮಗೆ ಯೋಗ್ಯತೆ ಇಲ್ಲ. ಹಾಗಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು 9 ಮಂದಿ ಸದಸ್ಯರು ತಿಳಿಸಿದ್ದಾರೆ.
ಯಾವುದೇ ಚಿತ್ರವನ್ನು ಡಬ್ಬಿಂಗ್ ಎಂದು ತೀರ್ಮಾನಿಸುವುದು ಒಂದಿಬ್ಬರಿಂದ ಅಲ್ಲ. ತಂತ್ರಜ್ಞರು, ಲ್ಯಾಬ್ ಸೇರಿದಂತೆ ಇತರೆ ಕಡೆ ಸಾಬೀತಾಗಬೇಕು. ಅನಾವಶ್ಯಕವಾಗಿ 'ಆ ಮರ್ಮ' ಚಿತ್ರ ಡಬ್ಬಿಂಗ್ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ನಿರ್ಮಾಪಕ ಉಮೇಶ್ ಬಣಕಾರ್ ಹೇಳಿದ್ದಾರೆ.
ಅಂದಹಾಗೆ ಆ ಮರ್ಮ ಚಿತ್ರದಲ್ಲಿ ಸಾಯಿ ಕುಮಾರ್, ಥ್ರಿಲ್ಲರ್ ಮಂಜು, ಅರ್ಚನಾ ಮುಖ್ಯ ಪಾತ್ರಧಾರಿಗಳು. ಕ್ರೈಂ ರಿಪೋರ್ಟರ್ ಆಗಿ ಅರ್ಚನಾ ಕಾಣಿಸಲಿದ್ದಾರೆ. ಆ ಮರ್ಮ' ಚಿತ್ರವನ್ನು ತೆಲುಗು ಮತ್ತು ತಮಿಳಿಗೆ ಡಬ್ ಮಾಡುತ್ತಿದ್ದೇವೆ ಎನ್ನುವ ಮಧುಸೂಧನ್ ಈ ಚಿತ್ರದ ನಿರ್ಮಾಪಕರು ಹೌದು.(ದಟ್ಸ್‌ಕನ್ನಡ ಸಿನಿವಾರ್ತೆ)