For Quick Alerts
  ALLOW NOTIFICATIONS  
  For Daily Alerts

  ಭಾರತಿ, ಶಿವರಾಜ್ ಕುಮಾರ್‌ಗೆ ಎನ್ಟಿಆರ್ ಪ್ರಶಸ್ತಿ

  By Rajendra
  |

  ಈ ಬಾರಿಯ ನಟ ರತ್ನ ಪದ್ಮಶ್ರೀ ಡಾ.ಎನ್.ಟಿ.ರಾಮಾರಾವ್ ಪ್ರಶಸ್ತಿಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯನ್ನು ಕರ್ನಾಟಕ ತೆಲುಗು ಅಕಾಡೆಮಿ ಪ್ರತಿ ವರ್ಷ ನೀಡುತ್ತಿದೆ.

  ಪ್ರಶಸ್ತಿಯನ್ನು ಜೂ.6ರಂದು ಸಂಜೆ 5 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಎನ್ಟಿಆರ್ ಅವರ 89ನೇ ಜನ್ಮದಿನೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಸಿ ವಿ ಶ್ರೀನಿವಾಸಯ್ಯ ತಿಳಿಸಿದ್ದಾರೆ.

  ಭಾರತ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ ಎ ಆರ್ ರಾಜು ಅವರು ಎನ್ಟಿಆರ್ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಶಾಸಕ ಎಂ ಕೃಷ್ಣಪ್ಪ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಅವರು ಪಾಲ್ಗೊಳ್ಳಲಿದ್ದಾರೆ. ಅಂದು ಘಂಟಸಾಲ ಗಾನಲಹರಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Veteran Kannada actress Bharathi Vishnuvardhan and Hat trick hero Shivarajkumar have been chosen for this year's NTR award by the Karnataka Telugu Academy. The awards will be presented during the 89th birth anniversary celebrations of the former Andhra Pradesh Chief Minister and actor N.T. Rama Rao on June 5 at the Ravindra Kalakshetra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X