»   » ಆರ್ಕುಟ್ ಬಳಕೆದಾರರಿಗೆ ದಟ್ಸ್ ಕನ್ನಡ ಸಿನಿಸೇವೆ

ಆರ್ಕುಟ್ ಬಳಕೆದಾರರಿಗೆ ದಟ್ಸ್ ಕನ್ನಡ ಸಿನಿಸೇವೆ

Posted By:
Subscribe to Filmibeat Kannada
Oneindia.in Launches Orkut App in Indian languages
ಬೆಂಗಳೂರು, ಡಿ. 2 : ಸೋಷಿಯಲ್ ನೆಟ್ವರ್ಕಿಂಗ್ ತಾಣ ಆರ್ಕುಟ್ ಬಳಸುತ್ತಿರುವ ಕನ್ನಡ ಸಿನೆಮಾ ಪ್ರೇಮಿಗಳು ಸಂತಸಪಡಲು ಇನ್ನೊಂದು ಕಾರಣವನ್ನು ದಟ್ಸ್ ಕನ್ನಡ ಒದಗಿಸಿಕೊಟ್ಟಿದೆ. ಪ್ರಾದೇಶಿಕ ಭಾಷಾ ವೆಬ್ ತಾಣಗಳ ಮುಖಾಂತರ ಅಂತರ್ಜಾಲದಲ್ಲಿ ತನ್ನದೇ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿರುವ ಒನ್‌ಇಂಡಿಯಾ.ಇನ್ ಈ ಸೇವೆಯ ಮುಖಾಂತರ ಸಿನೆಮಾ ಪ್ರೇಮಿ ನೆಟ್ಟಿಗರ ಹೃದಯಕ್ಕೆ ನೇರವಾಗಿ ಲಗ್ಗೆ ಹಾಕಿದೆ. ಆರ್ಕುಟ್ ಗಾಗಿ ಕನ್ನಡ ಸೇರಿದಂತೆ ಐದು ಪ್ರಾದೇಶಿಕ ಭಾಷೆಗಳಲ್ಲಿ ಎಂಟರ್ಟೇನ್ಮಂಟ್ ಎಪಿಪಿ(ಅಪ್ಲಿಕೇಷನ್)ಯನ್ನು ಒನ್ಇಂಡಿಯಾ ಪ್ರಾರಂಭಿಸಿದೆ.

ಪ್ರಾದೇಶಿಕ ಭಾಷೆಗಳಲ್ಲಿ ಎಸ್ಎಮ್ಎಸ್ ಸೇವೆಗಳನ್ನು ಒದಗಿಸುತ್ತಿರುವ ಒನ್ಇಂಡಿಯಾ.ಇನ್ ಪ್ರಾದೇಶಿಕ ಭಾಷಾ ಇಂಟರ್ನೆಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮನರಂಜನಾ ಎಪಿಪಿ ಸೇವೆ ಆರ್ಕುಟ್ ಮುಖಾಂತರ ಲಭ್ಯವಾಗಿದೆ. ವೈವಿಧ್ಯಮಯ ಸಿನೆಮಾ ಸುದ್ದಿಗಳು, ಚಿತ್ರವಿಮರ್ಶೆ, ಗಾಸಿಪ್, ಕ್ಯಾಸೆಟ್ ಬಿಡುಗಡೆ, ನಟ-ನಟಿಯರ ಕುರಿತ ತಾಜಾ ಸುದ್ದಿ ಮತ್ತಿತರ ಸ್ವಾರಸ್ಯಕರ ಸುದ್ದಿಗಳ ಪರಿಪೂರ್ಣ ಪ್ಯಾಕೇಜ್ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷಾ ಓದುಗರಿಗೆ ಸಿಗಲಿದೆ.

"ಸಿನೆಮಾ ಸುದ್ದಿಗಳೆಂದರೆ ಯಾರ ಕಣ್ಣುಗಳು ಅರಳಲಿಕ್ಕಿಲ್ಲ? ಸಿನೆಮಾ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಮನರಂಜನಾ ಲೋಕದ ಆಗುಹೋಗುಗಳು, ವಾದ-ವಿವಾದ, ಸುದ್ದಿಸೊಗಡುಗಳ ಬಗ್ಗೆ ತಿಳಿದುಕೊಳ್ಳಲು ಒನ್ಇಂಡಿಯಾ ಎಪಿಪಿ ಓದುಗರಿಗೆ ಅತ್ಯದ್ಭುತ ಅನುಕೂಲ ಒದಗಿಸಿಕೊಟ್ಟಿದೆ" ಎಂಬುದು ಗ್ರೇನಿಯಂ ಇನ್‌ಫಾರ್ಮೇಷನ್ ಟೆಕ್ನಾಲಜೀಸ್ ಸಿಇಓ ಬಿ.ಜಿ. ಮಹೇಶ್ ಅವರ ಸ್ಪಷ್ಟೋಕ್ತಿ. ಶೇ.17ರಷ್ಟು ಭಾರತೀಯ ಓದುಗರಿಂದ ಬಳಕೆಯಾಗುತ್ತಿರುವ ಆರ್ಕುಟ್ ಈ ಸೇವೆಗಳನ್ನು ಬಳಸಿಕೊಳ್ಳಲು ಮತ್ತು ಸಿನೆಸುದ್ದಿಗಳನ್ನು ಪರಸ್ಪರ ವಿನಮಯ ಮಾಡಿಕೊಳ್ಳಲು ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಅವರು ಹೇಳಿದರು.

ಬಳಕೆದಾರರು ಆರ್ಕುಟ್‌ಗೆ ಲಾಗಿನ್ ಮಾಡಿ ಒನ್ಇಂಡಿಯಾ.ಇನ್ ಮನರಂಜನಾ ಎಪಿಪಿ ಸೇವೆಗಳನ್ನು ಪಡೆಯಬಹುದು. ಅಥವಾ, http://www.oneindia.in/sns/ ತಾಣದಲ್ಲಿಯೂ ಈ ಸೇವೆಯ ಲಾಭವನ್ನು ಪಡೆಯಬಹುದು.

ಒನ್ಇಂಡಿಯಾ.ಇನ್ ಕುರಿತು

ಗ್ರೇನಿಯಂ ಇನ್‌ಫಾರ್ಮೇಷನ್ ಟೆಕ್ನಾಲಜೀಸ್ ಪ್ರೈ.ಲಿ.ನ ಮಾಲಿಕತ್ವದಲ್ಲಿರುವ ಒನ್ಇಂಡಿಯಾ.ಇನ್ ಭಾರತೀಯ ಇಂಟರ್ನೆಟ್ ಬಳಕೆದಾರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸುದ್ದಿ, ಮಾಹಿತಿ ಮತ್ತಿತರ ಸೇವೆಗಳನ್ನು ಒದಗಿಸುತ್ತಿರುವ ಪ್ರಮುಖ ಅಂತರ್ಜಾಲ ತಾಣ. ಒನ್ಇಂಡಿಯಾ.ಇನ್ ಅಡಿಯಲ್ಲಿರುವ ಪ್ರಾದೇಶಿಕ ಭಾಷಾ ವೆಬ್ ತಾಣಗಳು ಕಳೆದ ಎಂಟು ವರ್ಷಗಳಿಂದ (ಫೆಬ್ರವರಿ 2000ರಿಂದ) ನಿರಂತರವಾಗಿ ನೆಟ್ಟಿಗರ ಅಕ್ಷರದಾಹವನ್ನು ತಣಿಸುತ್ತಿವೆ.

ಒನ್ ಇಂಡಿಯಾ ಪೋರ್ಟಲ್ ಗಳು : Oneindia.in, Click.in

ವಿಳಾಸ :
Greynium Information Technologies Pvt. Ltd
5th Floor, Shanthishree Industrial Complex
17/1, Rupena Agrahara, Hosur Road,
Bangalore - 560 068 ; INDIA

ಈಮೇಲ್ : Inquiries@Greynium.com
ದೂರವಾಣಿ : +91.80.4058 0800
ಫ್ಯಾಕ್ಸ್ : +91.80. 4058 0801

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada