»   » ಪವರ್ ಸ್ಟಾರ್ ಪುನೀತ್ ಪ್ರಚಂಡ ಬುದ್ಧಿವಂತ

ಪವರ್ ಸ್ಟಾರ್ ಪುನೀತ್ ಪ್ರಚಂಡ ಬುದ್ಧಿವಂತ

Posted By:
Subscribe to Filmibeat Kannada
Puneet Rajkumar
ಕನ್ನಡದ ಹೆಮ್ಮೆಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರತಿಭೆ ಹಾಗೂ ಬುದ್ಧಿವಂತಿಕೆಯ ಸಂಗಮ. ಈ ಮಾತಿಗೆ ಅವರು ಸದ್ಯದಲ್ಲಿ ಇಟ್ಟಿರುವ ಹೆಜ್ಜೆಯೊಂದು ಪುಷ್ಟಿನೀಡುವಂತಿದೆ. ಅದು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಪುನೀತ್, ಟಿವಿ ಷೋ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು.

ಹೌದು, ಪುನೀತ್ ಸದ್ಯದಲ್ಲೇ 'ಕೌನ್ ಬನೇಗಾ ಕರೋಡ್ ಪತಿ' ಮಾದರಿಯ ಕನ್ನಡ ಟಿವಿ ಷೋದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ. ಅದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕಾರ್ಯಕ್ರಮ. ಯಾವಾಗ ಪ್ರಾರಂಭ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಈ ಮೂಲಕ ಎಲ್ಲರ ಗಮನ ಸೆಳೆದಿರುವ ಪುನೀತ್, ಇವತ್ತಿನ ಹಾಗೂ ಭವಿಷ್ಯದ ಅಗತ್ಯಗಳನ್ನು ಬಹುಬೇಗನೆ ಅರ್ಥಮಾಡಿಕೊಂಡು 'ಬುದ್ಧಿವಂತ' ಅನ್ನಿಸಿಕೊಂಡಿದ್ದಾರೆ.

"ನನಗೆ ಗೇಮ್ ಷೋ ಅಂದ್ರೆ ಇಷ್ಟ. ಜನರ ಜೊತೆ ಬೆರೆಯಲು, ಜನರಿಗೆ ಹತ್ತಿರವಾಗಲು ಇದೊಂದು ಒಳ್ಳೆಯ ಅವಕಾಶ" ಎಂದಿದ್ದಾರೆ ಅಪ್ಪು. ಕನ್ನಡ ಸಿನಿಮಾ ಬಿಟ್ಟು ಬೇರೆ ಬಾಷೆಗಳಲ್ಲಿ ನಟಿಸದಿರುವುದು ಡಾ, ರಾಜ್ ಕಾಲಕ್ಕೆ ಸರಿಯಾಗಿತ್ತು. ಟಿವಿ ಕಾರ್ಯಕ್ರಮ ಬೇಡ ಅನ್ನುವ ಕಾಲದಲ್ಲಿ ವಿಷ್ಣುವರ್ಧನ್ ಇದ್ದರು. ಆದರೆ ಈಗ ಕಾಲ ಬದಲಾಗಿದೆ. ಇದನ್ನು ಬಹುಬೇಗ ಅರ್ಥಮಾಡಿಕೊಂಡವರು ಪುನೀತ್. (ಒನ್ ಇಂಡಿಯಾ ಕನ್ನಡ)

English summary
Powerstar Puneet Rajkumar agreed to host a TV Show. It is a koun Banega Karode Pathi Type Programme. Puneet looks Intelligent and great.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada