ಶೀಘ್ರದಲ್ಲೆ ಬಹುನಿರೀಕ್ಷಿತ ರತ್ನಜ 'ಪ್ರೇಮಿಸಂ'
ರತ್ನಜ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಪ್ರೇಮಿಸಂ' ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದೆ. ಸದ್ಯದಲ್ಲೇ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಅಜಯ್ ಆರ್ ಗೌಡ ತಿಳಿಸಿದ್ದಾರೆ. ಕಲ್ಪನಾಶಕ್ತಿ ಲಾಂಛನದಲ್ಲಿ ಅಜಯ್ ಗೌಡ ಚಿತ್ರವನ್ನು ನಿರ್ಮಿಸಿದ್ದಾರೆ.
'ನೆನಪಿರಲಿ' ಖ್ಯಾತಿಯ ರತ್ನಜ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನು ರಚಿಸಿದ್ದಾರೆ. ಕರ್ನಾಟಕದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಶೀತಲ್‌ಜೈನ್ ಅವರ ಛಾಯಾಗ್ರಹಣವಿದೆ. 'ಪಿಯುಸಿ' ಚಿತ್ರದ ನಾಯಕ ಚೇತನ್ ಹಾಗೂ ಕೊಡಗಿನ ಹುಡುಗ ನೀರನ್ ಈ ಚಿತ್ರದ ನಾಯಕರು. 'ಚೆಲುವಿನ ಚಿತ್ತಾರ'ದ ಬೆಡಗಿ ಅಮೂಲ್ಯ 'ಪ್ರೇಮಿಸಂ'ನ ನಾಯಕಿ.
ಹಂಸಲೇಖ ಅವರು ಈ ಚಿತ್ರಕ್ಕೆ ಗೀತರಚನೆ ಮಾಡಿ ಸಂಗೀತ ಸಂಯೋಜಿಸಿದ್ದಾರೆ. ಕೆಂಪರಾಜ್ ಸಂಕಲನ, ಇಮ್ರಾನ್, ದೇವರಾಜ್ ನೃತ್ಯ, ಡಿಫ಼ರೆಂಟ್ ಡ್ಯಾನಿ ಸಾಹಸ, ಚಂದ್ರಪ್ಪ ನಿರ್ಮಾಣ ನಿರ್ವಹಣೆ, ರವಿಕುಮಾರ್ ಅವರ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಅನಂತನಾಗ್, ಅವಿನಾಶ್, ರೇಖಾ.ವಿ.ಕುಮಾರ್, ಸಂಗೀತ, ಶೋಭ್‌ರಾಜ್, ಶರಣ್, 'ಕುರಿಗಳು ಸಾರ್ ಕುರಿಗಳು' ಪ್ರಸಾದ್, ಸುನಿತಾ ಮುಂತಾದವರಿದ್ದಾರೆ.


Click it and Unblock the Notifications











