ರಾಖಿ ಸಾವಂತ್ ಹೊಟ್ಟೆಮೇಲೆ ತಣ್ಣೀರು ಬಟ್ಟೆ
ರಾಖಿ ಸಾವಂತ್ ಮೆಣಸಿನಕಾಯಿ ಜ್ಯೂಸ್ ಕುಡಿದಿದ್ದಾರಾ? ಇರಲಿಕ್ಕಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚು ಕಿಚ್ಚು ಹೊರಹಾಕಿದ್ದಾರೆ ರಾಖಿ. ಇರೋ ನಾಯಕಿಯರೆಲ್ಲಾ ಐಟಂ ಸಾಂಗ್ ಗೆ ಹೆಜ್ಜೆ ಹಾಕಿ ಖ್ಯಾತಿ ಗಳಿಸುತ್ತಿರುವುದು, ಹೊಟ್ಟೆಗೆ ಅದನ್ನೇ ನಂಬಿ ಕುಳಿತಿರುವ ರಾಖಿಯನ್ನು ಕೆರಳಿಸದೇ ಇರುತ್ತಾ? ಸಿಟ್ಟು ಬರದಿದ್ರೂ ಕೂಗಾಡಬಲ್ಲ ರಾಖಿಗೆ ಈಗ ಬಂದಿದೆ, ಕೇಳಬೇಕೆ?
"ನಾನು ಐಟಂ ಸಾಂಗ್ ಗಳಿಂದಲೇ ವೃತ್ತಿ ಆರಂಭಿಸಿರೋಳು. ಐಟಂ ಸಾಂಗ್ ಬಿಟ್ಟು ನಾನು ನಾಯಕಿ ಆಗಲು ಪ್ರಯತ್ನಿಸಿಲ್ಲ. ಹಾಗಿರುವಾಗ ನಾಯಕಿಯರೆಲ್ಲ ಐಟಂ ಸಾಂಗಿಗೆ ಹೆಜ್ಜೆ ಹಾಕಿ ನನ್ನಂಥವರ ಹೊಟ್ಟೆಗೆ ಯಾಕೆ ಹೊಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ನೆಗೆಟಿವ್ ರೋಲ್, ಫೈಂಟಿಂಗ್ ಹೀಗೆ ಎಲ್ಲದಕ್ಕೂ ರೆಡಿಯಾಗಿದ್ದಾರೆ. ಎಲ್ಲಾನೂ ಇವ್ರೇ ಮಾಡೋದಾದ್ರೆ ನಾವೆಲ್ಲಾ ಯಾಕಿದೀವಿ?
ಎಲ್ಲರಿಗೂ ಛಾನ್ಸ್ ಸಿಗಬೇಕು, ಎಲ್ಲರೂ ಊಟ ಮಾಡಬೇಕು. "ಒರಿಜಿನಲ್ ಐಟಂ ಗರ್ಲ್" ಅನ್ನಿಸಿಕೊಂಡಿರುವ ನಾನಿರಬೇಕಾದ್ರೆ ಇದೇನಿದು" ಅಂತ ಕೂಗಾಡಿದ್ದಾಳೆ. ಅವಳ ಮಾತು 'ಖಾಸ್ ಬಾತ್' ಅಂದುಕೊಂಡು ಉಳಿದ ನಟಿಯರು ಇನ್ನಷ್ಟು ಐಟಂ ಡಾನ್ಸ್ ಒಪ್ಪಿಕೊಳ್ಳೊದ್ರಲ್ಲಿ ಬ್ಯುಸಿಯಾಗಿದ್ದಾರೆ. ರಾಖಿಗೆ ಉತ್ತರ ನೀಡುವವರೇ ಗತಿಯಿಲ್ಲ. (ಏಜೆನ್ಸೀಸ್)


Click it and Unblock the Notifications











