ಕ್ರೇಜಿ ಸ್ಟಾರ್ ಮಂಜಿನ ಹನಿಗೆ ಕಡೆಗೂ ಬಿಡುಗಡೆ ಭಾಗ್ಯ
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಹುನಿರೀಕ್ಷಿತ 'ಮಂಜಿನ ಹನಿ' ಚಿತ್ರಕ್ಕೆ ಕಡೆಗೂ ಬಿಡುಗಡೆ ಭಾಗ್ಯ ಸಿಗುತ್ತಿದೆ. ಮುಂದಿನ ಸಂಕ್ರಾಂತಿ ಹಬ್ಬಕ್ಕೆ 'ಮಂಜಿನ ಹನಿ'ಯನ್ನು ತೆರೆಗೆ ತರುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ. ಕವಿತಾ ಲಂಕೇಶ್ ನಿರ್ದೇಶಿಸುತ್ತಿರುವ 'ಕ್ರೇಜಿಲೋಕ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ರವಿ ಮಾತನಾಡುತ್ತಿದ್ದರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಫ್ ರೆಸಾರ್ಟ್‌ನಲ್ಲಿ 'ಕ್ರೇಜಿ ಲೋಕ' ಚಿತ್ರೀಕರಣ ಆರಂಭವಾಗಿದೆ. ಕವಿತಾ ಲಂಕೇಶ್ ಅವರೇ ಕತೆ, ಚಿತ್ರಕತೆ ಬರೆದಿರುವ ಈ ಚಿತ್ರದ ಒಂದೆರಡು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ಡೈಸಿ ಬೋಪಣ್ಣ ಹಾಗೂ ಹರ್ಷಿಕಾ ಪೂಣಚ್ಚ ಕೂಡ ಚಿತ್ರದತಾರಾಬಳಗದಲ್ಲಿದ್ದಾರೆ.
"ಈಗ ನನಗೆ ಯಾರು ಯಂಗ್ ರೋಲ್‌ಗಳನ್ನು ಕೊಡ್ತಾರೆ ಹೇಳಿ. ಹಾಗಾಗಿ ಚಿತ್ರದಲ್ಲಿ ತಮ್ಮದು ಮಧ್ಯ ವಯಸ್ಕ ವಿದ್ಯಾರ್ಥಿಯ ಪಾತ್ರ. ಚಿತ್ರದ ಬಗ್ಗೆ ಇಷ್ಟು ಬಿಟ್ಟು ಇನ್ನೇನು ಹೇಳಲಾರೆ. ಏಕೆಂದರೆ ನಿರ್ದೇಶಕರ ಆಜ್ಞೆಯಾಗಿದೆ" ಎಂದು ಸಿಹಿಕಹಿಯಾಗಿಯೇ ಹೇಳಿದರು ರವಿಚಂದ್ರನ್.
ಜನವರಿ 12ರ ಹೊತ್ತಿಗೆ 'ಮಂಜಿನ ಹನಿ' ಚಿತ್ರ ಬಿಡುಗಡೆ ಮಾಡುತ್ತೇನೆ. ಗ್ರಾಫಿಕ್ಸ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಕಷ್ಟು ಸಮಯ ತಿಂದು ಹಾಕಿದವು.ಹಾಗಾಗಿ ಚಿತ್ರ ತಡವಾಯಿತು ಎಂದು ರವಿ ಹೇಳಿದರು. ಮಂಜಿನ ಹನಿ ಬಿಡುಗಡೆಯಂದೆ ನನ್ನ ಹುಟ್ಟುಹಬ್ಬ ಎಂದಿದ್ದರು ರವಿಚಂದ್ರನ್. ಬಹುಶಃ ಜನವರಿ 12ಕ್ಕೆ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳಲಿ ಎಂದು ಆಶಿಸೋಣ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











