ಕೆ ಮಾದೇಶ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್
ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಗಾಲೋಟ ಮುಂದುವರಿದಿದೆ. ರಾಧಿಕಾ ಕುಮಾರಸ್ವಾಮಿ ನಿರ್ಮಾಣದ 'ಲಕ್ಕಿ' ಚಿತ್ರವನ್ನು ಇತ್ತೀಚಿಗೆ ಮುಗಿಸಿರುವ ಯಶ್, ಈಗ ಪ್ರೀತಮ್ ಗುಬ್ಬಿ ನಿರ್ದೇಶನದ 'ಜಾನೂ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಯೋಗರಾಜ್ ಭಟ್ ನಿರ್ದೆಶನದ 'ಡ್ರಾಮಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಡ್ರಾಮಾ ಮುಗಿದ ನಂತರ 'ಸಂಜು ವೆಡ್ಸ್ ಗೀತಾ' ಯಶಸ್ವಿ ಚಿತ್ರ ನಿರ್ದೇಶಿಸಿದ್ದ ನಾಗಶೇಖರ್ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಯಶ್. ಇಷ್ಟಲ್ಲದೇ ಇದೀಗ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿರುವ ಸುದ್ದಿ ಬಂದಿದೆ. ಅದು ರೀಮೇಕ್ ನಿರ್ದೇಶಕ ಎಂದೇ ಖ್ಯಾತರಾಗಿರುವ ಕೆ ಮಾದೇಶ್ ಅವರ ತೆಲುಗು 'ಕಂದಿರೀಗ' ಚಿತ್ರದ ರೀಮೇಕ್.
ಮೂಲ ಚಿತ್ರ ತೆಲುಗಿನ 'ಕಂದಿರೀಗ'ದಲ್ಲಿ ನಟ ರಾಮ್ ನಟಿಸಿದ್ದರು. ಆ ಪಾತ್ರವನ್ನು ಇಲ್ಲಿ ಯಶ್ ಮಾಡುತ್ತಿದ್ದಾರೆ. ರಾಜಧಾನಿ ಚಿತ್ರದ ನಂತರ ಆಕ್ಷನ್ ಗೂ ಸೈ ಎನಿಸಿರುವ ಯಶ್, ಈ ಚಿತ್ರದಲ್ಲಿ ಆಕ್ಷನ್ ಬೇಸ್ಡ್ ಪಾತ್ರದಲ್ಲೇ ಮಿಂಚಲಿದ್ದಾರೆ. ನಾಯಕಿ ಹಾಗೂ ಉಳಿದ ತಾರಾಗಣದ ಆಯ್ಕೆ ನಡೆಯಬೇಕಿದೆ. ಶಿವಣ್ಣ, ಯೋಗಿ ಹಾಗೂ ಕಿಟ್ಟಿ ತಾರಾಗಣದ 'ಒಗ್ಗಟ್ಟು' ಚಿತ್ರದ ನಂತರ ಮಾದೇಶ್ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











