ಯಮೇಂದ್ರ ಉಪೇಂದ್ರ ಚಿತ್ರದಿಂದ ಸಾಧು ಕೋಕಿಲಾಗೆ ಕೊಕ್

ಈ ಹಿಂದೆ ದಿವಂಗತ ವಿಷ್ಣುವರ್ಧನ್ ಮುಖ್ಯಭೂಮಿಕೆಯಲ್ಲಿದ್ದ ಕದಂಬ, ಜ್ಯೇಷ್ಠ ಚಿತ್ರಗಳನ್ನು ಸುರೇಶ್ ಕೃಷ್ಣ ನಿರ್ದೇಶಿಸಿದ್ದರು. ಈಗ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ 'ಯಮೇಂದ್ರ ಧರ್ಮೇಂದ್ರ' ಚಿತ್ರಕ್ಕೆ ಸುರೇಶ್ ಆಕ್ಷನ್ ಕಟ್ ಹೇಳಲಿದ್ದಾರೆ.
ಸಾಧು ಕೋಕಿಲ ಅವರು 'ಅನಾರ್ಕಲಿ' ಚಿತ್ರದಲ್ಲಿ ಬ್ಯುಸಿಯಾಗಿರುವ ಕಾರಣ ಅವರನ್ನು 'ಯಮೇಂದ್ರ ಉಪೇಂದ್ರ' ಚಿತ್ರದಿಂದ ಕೈಬಿಡಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ವರದಿ ಹೊರಬಿದ್ದಿಲ್ಲ. ನವೆಂಬರ್ 14ರಂದು 'ಯಮೇಂದ್ರ ಉಪೇಂದ್ರ' ಬೆಂಗಳೂರಿನಲ್ಲಿ ಸೆಟ್ಟೇರಲಿದೆ.
ಸದ್ಯಕ್ಕೆ ಚಿತ್ರ ನಿರ್ಮಾಣದ ಮುನ್ನಾ ಕಾರ್ಯಕ್ರಮಗಳು ಭರದಿಂದ ಸಾಗುತ್ತಿದ್ದು, ರಾಕ್‌ಲೈನ್ ಸ್ಟುಡಿಯೋದಲ್ಲಿ ಎರಡು ಯಮಲೋಕ ಸೆಟ್‌ಗಳನ್ನು ಹಾಕಲಾಗಿದೆ. ಈ ಚಿತ್ರದ ನಾಯಕಿ ರಮ್ಯಾ. ಇದೊಂದು ಸಾಮಾಜಿಕ-ಪೌರಾಣಿಕ ಚಿತ್ರ ಎನ್ನುತ್ತಾರೆ ಮುನಿರತ್ನ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Actor-director Sadhu Kokila opts out from Munirathna's Yamendra-Upendra. Earlier actor-director Sadhu Kokila was chosen to direct the film. Now Suresh Krishna will be directing Upendra and Ambareesh starrer Yamendra-Upendra.


Click it and Unblock the Notifications











