ಮಣಿರತ್ನಂ ಸ್ಕ್ರೀನ್ ಟೆಸ್ಟ್‌ನಲ್ಲಿ ನಟಿ ಸಮಂತಾ ಫೇಲ್!

By Rajendra

ತಮ್ಮ ಬಹುನಿರೀಕ್ಷಿತ 'ರಾವಣ್' ಚಿತ್ರ ನೆಲಕಚ್ಚಿದ ಮೇಲೆ ಖ್ಯಾತ ನಿರ್ದೇಶಕ ಮಣಿರತ್ನಂಗೆ ಜ್ಞಾನೋದಯವಾದಂತಿದೆ. ಈಗವರು ತಮ್ಮ ಮುಂದಿನ ಚಿತ್ರದ ಬಗ್ಗೆ ಸಿದ್ಧತೆಗಳನ್ನು ನಡೆಸಿದ್ದು, ಪಾತ್ರವರ್ಗವನ್ನು ಅಳೆದುತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೆ ಚಿತ್ರದ ನಾಯಕ ನಟನಾಗಿ ಗೌತಮ್ ಎಂಬುವರನ್ನು ಆಯ್ಕೆ ಮಾಡಲಾಗಿದೆ.

ತಮಿಳು, ತೆಲುಗು ಚಿತ್ರಗಳಲ್ಲಿ ಗ್ಲಾಮರಸ್ ರೋಲ್‌ಗಳಲ್ಲಿ ಮಿಂಚಿದ್ದ ಸಮಂತಾ ಎಂಬ ಬೆಡಗಿಯನ್ನು ತಮ್ಮ ಮುಂದಿನ ಚಿತ್ರಕ್ಕೆ ಮಣಿ ಕರೆತರಲು ನಿರ್ಧರಿಸಿದ್ದರು. ಆದರೆ ಮಣಿ ಅವರ ಸ್ಕ್ರೀನ್ ಟೆಸ್ಟ್‌ನಲ್ಲಿ ಸಮಂತಾ ಫೇಲ್ ಆಗಿದ್ದಾರೆ. ಮಣಿರತ್ನಂ ಚಿತ್ರದಲ್ಲಿ ಅಭಿನಯಿಸಬೇಕು ಎಂಬ ಸಮಂತಾ ಕನಸು ಭಗ್ನವಾಗಿದೆ.

ಸಂವೇದನಾಶೀಲ ಮನಸುಗಳ ಲವ್ ಸ್ಟೋರಿಯೊಂದನ್ನು ಮಣಿ ಈ ಬಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಶ್ರೀಲಂಕಾದ ನೌಕಾದಳದ ಕೈಗೆ ಸಿಕ್ಕ ರಾಮೇಶ್ವರಂ ಮೀನುಗಾರ ಬದುಕು ಬವಣೆಯ ಹಿನ್ನೆಲೆಯಲ್ಲಿ ಕತೆ ಸಾಗುತ್ತದೆ. ಆದರೆ ಚಿತ್ರದ ನಾಯಕಿ ಸಮಂತಾ ಸ್ಕ್ರೀನ್ ಟೆಸ್ಟ್‌ನಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಮಣಿರತ್ನಂ ಮತ್ತೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರೆ. (ಏಜೆನ್ಸೀಸ್)

More from Filmibeat

English summary
According to sources, Mani Ratnam's next will be an intense love story based on the sensitive issue of plight of Rameshwaram fishermen at the hands of Sri Lankan Navy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X