ಸಂಗೊಳ್ಳಿ ರಾಯಣ್ಣನ ಆಪ್ತಮಿತ್ರನಾಗಿ ಶಶಿಕುಮಾರ್

By Rajendra

ಬೆಳ್ಳಿಪರದೆ ಮೇಲೆ ಆಗೊಮ್ಮೆ ಈಗೊಮ್ಮೆ ದರ್ಶನ ನೀಡುತ್ತಿದ್ದ ನಟ ಶಶಿಕುಮಾರ್ ಈಗ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರತಂಡ ಸೇರಿದ್ದಾರೆ. ಚಿತ್ರದಲ್ಲಿ ಅವರು ರಾಯಣ್ಣನ ಆಪ್ತಮಿತ್ರ ಹಾಗು ರಕ್ಷಕನಾಗಿ ಕಾಣಿಸಲಿದ್ದಾರೆ. 'ಬಿಚ್ಚುಗತ್ತಿ' ಚನ್ನಬಸವನ ಪಾತ್ರದಲ್ಲಿ ಶಶಿಕುಮಾರ್ ಮಿಂಚಲಿದ್ದಾರೆ.

ಸದಾ ಕೈಯಲ್ಲಿ ಕತ್ತಿಯನ್ನು ಹಿಡಿದಿರುವ ಕಾರಣ 'ಬಿಚ್ಚುಗತ್ತಿ' ಎಂಬ ಬಿರುದು. ಈ ಪಾತ್ರವನ್ನು ಅವರು ತುಂಬು ಸಂತೋಷದಿಂದ ಒಪ್ಪಿಕೊಂಡಿದ್ದಾರಂತೆ. ಚಿತ್ರದಲ್ಲಿ ನಾಯಕನಿಗಿರುವಷ್ಟೆ ಪ್ರಾಮುಖ್ಯತೆ ಈ ಪಾತ್ರಕ್ಕಿದೆಯಂತೆ. ರಾಯಣ್ಣನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಾಯಕಿಯಾಗಿ ನಿಖಿತಾ ಅಭಿನಯಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ತೆರೆಕಂಡ 'ನಾರದ ವಿಜಯ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಶಶಿಕುಮಾರ್ ಕಾಣಿಸಿದ್ದರು. ಈಗ ಅಂತಹದ್ದೇ ವಿಭಿನ್ನ ಪಾತ್ರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಅವರನ್ನು ಹುಡುಕಿಕೊಂಡು ಬಂದಿದೆ.

ಅಂದಹಾಗೆ ಈ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ನಟಿ ಜಯಪ್ರದ ಕಾಣಿಸಲಿದ್ದಾರೆ. ಆನಂದ ಬಿ ಅಪ್ಪುಗೋಳು ನಿರ್ಮಿಸುತ್ತಿರುವ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವರು ನಾಗಣ್ಣ. ಜನವರಿ 19 ರಿಂದ ಸುಮಾರು 120 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X