ಎರಡು ವರ್ಷಗಳ ಬಳಿಕ ಮರಳಿದ ಶುಭಾ ಪೂಂಜಾ
'ಕಂಠೀರವ' (ತೆಲುಗಿನ 'ಸಿಂಹಾದ್ರಿ' ರೀಮೇಕ್) ಚಿತ್ರದ ಬಳಿಕ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಆದರೆ ಎಲ್ಲವನ್ನೂ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ ಕಿರುತೆರೆಯಲ್ಲಿ ಬಿಜಿಯಾದೆ.
ಇದು ಹೀಗೆ ಮುಂದುವರಿದರೆ ಪ್ರೇಕ್ಷಕರು ತಮ್ಮನ್ನು ಎಲ್ಲಿ ಮರೆತುಹೋಗುತ್ತಾರೋ ಎಂಬ ಭೀತಿ ಕಾಡಿತು. ಹಾಗಾಗಿ ಪುನಃ ಬೆಳ್ಳಿತೆರೆಗೆ ಬರುತ್ತಿದ್ದೇನೆ ಎಂದಿದ್ದಾರೆ ಶುಭಾ. ಅಭಿಮಾನಿಗಳು ಬಯಸಿದರೆ ಗ್ಲಾಮರ್ ಪಾತ್ರಗಳಲ್ಲೂ ಅಭಿನಯಿಸಲು ರೆಡಿ ಎಂದಿದ್ದಾರೆ.
ಪರಭಾಷೆಯಲ್ಲೂ ಅವಕಾಶಗಳು ಬರುತ್ತಿವೆ. ಆದರೆ ಅಲ್ಲಿ ಹೆಸರು ಮಾಡುವುದು ಸಿಕ್ಕಾಪಟ್ಟೆ ಕಷ್ಟ. ಆದರೆ ಕನ್ನಡದಲ್ಲಿ ಹಾಗಲ್ಲ. ಈಗಾಗಲೆ ತಮ್ಮದೇ ಆದಂತಹ ಅಭಿಮಾನಿ ಬಳಗವಿದೆ. ಇಲ್ಲೇ ಆದಷ್ಟು ಹೆಸರು ಮಾಡಲು ಬಯಸುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಈ ಹಿಂದೊಮ್ಮೆ ನಟನೊಬ್ಬನ ಜೊತೆ ಸಂಬಂಧವಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ರೀತಿಯ ವದಂತಿಗಳಿಂದ ದೂರವಾಗಿ, ಸ್ವಲ್ಪ ಜಾಗ್ರತೆಯಿಂದ ಇರಬೇಕಾಗುತ್ತದೆ ಎಂದಿರುವ ಅವರು, ಮದುವೆ ಯಾವಾಗ ಎಂದರೆ, ಮುಗುಳ್ನಗೆಯೇ ಉತ್ತರ. (ಒನ್‍ಇಂಡಿಯಾ ಕನ್ನಡ)


Click it and Unblock the Notifications












