ಕಿಚ್ಚ ಸುದೀಪ್, ಸ್ಟಾರ್ ಗಣೇಶ್ ಮಧ್ಯೆ ಜಟಾಪಟಿ

ದ್ವಾರಕೀಶ್ ನಿರ್ಮಾಣದ ವಿಷ್ಣುವರ್ಧನ ಹಾಗೂ ಎಸ್ ನಾರಾಯಣ್ ನಿರ್ದೇಶನದ ಶೈಲೂ ಎರಡೂ ಒಂದೊಂದು ದಿನಗಳ ಅಂತರದಲ್ಲಿ ತೆರೆಗೆ ಅಪ್ಪಳಿಸುತ್ತಿರುವುದು ಪ್ರೇಕ್ಷಕರ ದೃಷ್ಟಿಯಿಂದ ಖುಷಿ ಪಡುವ ಸಮಾಚಾರ. ಆದರೆ ನಿರ್ಮಾಪಕರು ಹಾಗೂ ಚಿತ್ರತಂಡದ ಕಡೆಯಿಂದ ಖುಷಿ ಪಡುವ ವಿಚಾರವಲ್ಲ ಎಂಬುದು ಯೋಚಿಸಬೇಕಾದ ಸಂಗತಿ.
ಕನ್ನಡ ಚಿತ್ರಗಳಿಗೆ ಹೀಗೆ ಕನ್ನಡ ಚಿತ್ರಗಳೇ ಪೈಪೋಟಿ ನೀಡುವ ಕಾಲ ಎದುರಾಗುವುದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂಬುದು ಬಹಳಷ್ಟು ಜನರ ಅಭಿಮತ. ನಿರ್ಮಾಪಕರು ನಿಜವಾಗಿಯೂ ಈ ಬಗ್ಗೆ ಯೋಚಿಸುವ ಕಾಲ ಮತ್ತೆ ಬಂದಿದೆ. ನಟರೂ ಇದನ್ನು ಯೋಚಿಸಿದರೆ ಒಳ್ಳೆಯದಾದರೂ ಬಿಡುಗಡೆಯ ವಿಷಯದಲ್ಲಿ ಮೂಗು ತೂರಿಸುವುದೂ ಸರಿಯಲ್ಲ. ಒಟ್ಟಿನಲ್ಲಿ ಎರಡರಲ್ಲಿ ಯಾವುದಕ್ಕೆ ನಿರೀಕ್ಷಿತ ಗೆಲುವು ಎಂಬುದು ಸದ್ಯದ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actor kichcha Sudeep movie Vishnuvardhana releases on Dec. 08 and Next day, on 9th, the Golden star Ganesh movie Shailoo. Kannada movie competes itself.


Click it and Unblock the Notifications











