twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗಿನ ಪೋಕಿರಿ ಕನ್ನಡಕ್ಕೆ ರೀಮೇಕ್

    By Staff
    |

    darshan
    ಕರ್ನಾಟಕ ಸರ್ಕಾರ ರೀಮೇಕ್ ಚಿತ್ರಗಳಿಗೆ ಸಂಪೂರ್ಣ ರಿಯಾಯಿತಿ ಘೋಷಿಸಿದ ನಂತರ ನಮ್ಮ ನಿರ್ಮಾಪಕ, ನಿರ್ದೇಶಕರು ದಕ್ಷಿಣ ಭಾರತದ ಜನಪ್ರಿಯ ಚಿತ್ರಗಳತ್ತ ದೃಷ್ಟಿ ಹರಿಸಿ ಹಲವಾರು ಚಿತ್ರಗಳನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.ಕನ್ನಡ ರೀಮೇಕ್ ಚಿತ್ರಗಳ ಸಾಲಿಗೆ ಮತ್ತೊಂದು ತೆಲುಗಿನ ಜನಪ್ರಿಯ ಚಿತ್ರ ಸೇರ್ಪಡೆಯಾಗಲಿದೆ. ತೆಲುಗಿನ 'ಪೋಕಿರಿ' ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಲು ನಿರ್ದೇಶಕ ಎಂಡಿ ಶ್ರೀಧರ್ ತಯಾರಿ ನಡೆಸಿದ್ದಾರೆ.

    ಮಹೇಶ್ ಬಾಬು ನಟನೆಯ 'ಪೋಕಿರಿ' ಚಿತ್ರ ತೆಲುಗು ಚಿತ್ರರಂಗದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿ ಹೊಸ ದಾಖಲೆ ಬರೆದಿತ್ತು. ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದರು. ಪೋಕಿರಿ ಕನ್ನಡ ಚಿತ್ರಪ್ರೇಮಿಗಳಿಗೆ ಇಷ್ಟವಾಗುತ್ತದೆ ಎಂಬ ಕಾರಣಕ್ಕೆ ಇದರ ರೀಮೇಕ್ ಹಕ್ಕುಗಳನ್ನು ರು.18 ಲಕ್ಷಕ್ಕೆ ಖರೀದಿಸಿರುವುದಾಗಿ ಎಂಡಿ ಶ್ರೀಧರ್ ತಿಳಿಸುತ್ತಾರೆ.

    ಕನ್ನಡ ಚಿತ್ರೋದ್ಯಮದ ಮೂಲಗಳ ಪ್ರಕಾರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಪ್ರಸ್ತುತ ತಮ್ಮ ಜಾಲಿ ಡೇಸ್ ಚಿತ್ರದ ಬಿಡುಗಡೆ ಕಾರ್ಯಗಳಲ್ಲಿ ಎಂಡಿ ಶ್ರೀಧರ್ ಬ್ಯುಸಿಯಾಗಿದ್ದಾರೆ. ಡಿಸೆಂಬರ್ ಎರಡನೇ ವಾರದಲ್ಲಿ ಜಾಲಿ ಡೇಸ್ ತೆರೆ ಕಾಣಲಿದೆ. ಈ ಚಿತ್ರ ಸಹ ತೆಲುಗಿನ 'ಹ್ಯಾಪಿ ಡೇಸ್' ಚಿತ್ರದ ರೀಮೇಕ್. ತೆಲುಗಿನ ಜನಪ್ರಿಯ ಚಿತ್ರಗಳೆಲ್ಲಾ ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದೀರಲ್ಲಾ? ಎಂದು ಶ್ರೀಧರ್ ಅವರನ್ನ್ನು ಪ್ರಶ್ನಿಸಿದರೆ, ಉತ್ತಮ ಕಥಾವಸ್ತುವುಳ್ಳ ತೆಲುಗು, ತಮಿಳು, ಮಲೆಯಾಳಂ ಚಿತ್ರಗಳನ್ನು ಕನ್ನಡಕ್ಕೆ ತರುವುದರಲ್ಲಿ ತಪ್ಪೇನು ಇಲ್ಲ ಎಂದು ಶ್ರೀಧರ್ ಸಮರ್ಥಿಸಿಕೊಳ್ಳುತ್ತಾರೆ.

    ಪೋಕಿರಿ ಚಿತ್ರಒಟ್ಟು 250 ಪ್ರಿಂಟ್ ಗಳೊಂದಿಗೆ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿ ದಾಖಲೆ ನಿರ್ಮಿಸಿತ್ತು. ಕಳೆದ ಎರಡು ವರ್ಷಗಳಿಂದ ಗಳಿಕೆಯಲ್ಲಿ ಇನ್ನೂ ಮುಂದಿದೆ. ಒಂದು ಚಿತ್ರ ಇಷ್ಟೆಲ್ಲಾ ಜನಪ್ರಿಯತೆಗೆ ಕಾರಣವಾಗುತ್ತದೆ ಎಂದರೆ ಆ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡದರೆ ತಪ್ಪೇನು? ನನ್ನ ಚಿತ್ರಕ್ಕೆ ನಾಯಕ ನಟ ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ದರ್ಶನ್ ರನ್ನು ಭೇಟಿ ಮಾಡಿದ್ದೇನೆ, ಮಾತುಕತೆ ಮುಂದು ವರಿಯುತ್ತಿದೆ .ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳಲಿ ಒಬ್ಬರು ನಟಿಸಬೇಕೆಂಬುದು ನನ್ನ ಆಸೆ ಎಂದರು ಎಂಡಿ ಶ್ರೀಧರ್.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Tuesday, December 2, 2008, 17:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X